ಹಳಿಯಾಳ | ಕುಸಿದ ಮನೆಯ ಗೋಡೆ: ಮಲಗಿದ್ದ ತಾಯಿ-ಮಗಳು ಮಣ್ಣಿನಡಿಗೆ ಸಿಲುಕಿ ಮೃತ್ಯು

ಹಳಿಯಾಳ, ಜು.12: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿ ಮಳೆಯಿಂದ ಭಾರೀ ಅನಾಹುತ ಸಂಭವಿಸಿದೆ. ಮಲಗಿದ್ದವರ ಮೇಲೆ ಮನೆ ಗೋಡೆ ಕುಸಿದು ಬಿದ್ದ ಪರಿಣಾಮ ತಾಯಿ ಮತ್ತು ಮಗಳು ಮೃತಪಟ್ಟ ಘಟನೆ ಮಂಗಳವಾರ ಮುಂಜಾನೆ ಮುರ್ಕವಾಡ ಗ್ರಾಮದಲ್ಲಿ ಸಂಭವಿಸಿದೆ.
ಇಲ್ಲಿನ ನಿವಾಸಿ ರುಕ್ಮಿಣಿ ವಿಠ್ಠಲ್ ಮಾಚಕ (37) ಮತ್ತು ಅವರು ಪುತ್ರಿ ಶ್ರೀದೇವಿ ವಿಠ್ಠಲ್ ಮಾಚಕ (13) ಮೃತಪಟ್ಟವರಾಗಿದ್ದಾರೆ.
ನಿರಂತರ ಮಳೆಯ ಪರಿಣಾಮ ಇಂದು ಬೆಳಗಿನ ಜಾವ ಮನೆ ಗೋಡೆ ಏಕಾಏಕಿ ಕುಸಿದಿದೆ. ಈ ವೇಳೆ ಗೋಡೆ ಪಕ್ಕದಲ್ಲಿ ಮಲಗಿದ್ದ ತಾಯಿ ಮಗಳ ದುರಂತ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನಾ ಸ್ಥಳಕ್ಕೆ ಹಳಿಯಾಳ ತಹಶಿಲ್ದಾರ ಪ್ರಕಾಶ ಗಾಯಕವಾಡ್ ಹಾಗೂ ತಾಪಂ ಇಓ ಪರಶುರಾಮ್ ಗಸ್ತಿ ಹಾಗೂ ಅಧಿಕಾರಿಗಳ ತಂಡ ಭೇಟಿ ಪರಿಶೀಲನೆ ನಡೆಸಿದ್ದಾರೆ.
Next Story









