ಚುನಾವಣಾ ಸಿದ್ಧತೆ ಆರಂಭಿಸಿದ ಬಿಜೆಪಿ: ಪ್ರಿಯಾಂಕ್ ಖರ್ಗೆ ವಾಗ್ದಾಳಿ
''KKRDBಯಲ್ಲಿ ಬಿಜೆಪಿ ಶಾಸಕರಿಗೆ 28.5 ಕೋಟಿ ರೂ., ಕಾಂಗ್ರೆಸ್ ಶಾಸಕರಿಗೆ 4 ಕೋಟಿ ರೂ.''

ಬೆಂಗಳೂರು: ಕೆಕೆಆರ್‌ಡಿಬಿ (ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ) ಅಭಿವೃದ್ಧಿಗೆ ಬಿಜೆಪಿ ಶಾಸಕರಿಗೆ 28.5 ಕೋಟಿ, ಕಾಂಗ್ರೆಸ್ ಶಾಸಕರಿಗೆ 4 ಕೋಟಿ ರೂ. ನೀಡಲಾಗಿದೆ ಎಂದು ಶಾಸಕ, ರಾಜ್ಯ ಕಾಂಗ್ರೆಸ್ ಸಂವಹನ ಮತ್ತು ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ.
ಈ ಕುರಿತು ಮಂಗಳವಾರ ಟ್ವೀಟ್ ಮಾಡಿರುವ ಅವರು, ಬಿಜೆಪಿ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ಕೆಕೆಆರ್‌ಡಿಬಿ ಅಭಿವೃದ್ಧಿಗೆ ಬಿಜೆಪಿ ಶಾಸಕರಿಗೆ 28.5 ಕೋಟಿ, ಕಾಂಗ್ರೆಸ್ ಶಾಸಕರಿಗೆ 4 ಕೋಟಿ ನೀಡಲಾಗಿದೆ. ಇನ್ನು ಮ್ಯಾಕ್ರೋದಲ್ಲಿ ಪರಿಷತ್ ಸದಸ್ಯರು ಮತ್ತು ಶಾಸಕರಿಗೆ ನಿಯಮಗಳಿಗೆ ವಿರುದ್ಧವಾಗಿ ನೇರ ಹಣ ಹಂಚಿಕೆಯಾಗಿದೆ ಎಂದು ಆಪಾದಿಸಿದ್ದಾರೆ.
ಕ್ರಿಯಾತ್ಮಕವಲ್ಲದ ಆಸ್ಪತ್ರೆಗೆ 5 ಕೋಟಿ ರೂ. ಏಕೆ? ಇನ್ನು 6 ಕೋಟಿ ರೂ. ಕಾಯ್ದಿರಿಸಿದ್ದು (reserved) ಏಕೆ? ಎಂದು ಪ್ರಶ್ನೆ ಮಾಡಿರುವ ಅವರು, KKRDB ಈಗ 'ಬಿಜೆಪಿ ಅಭಿವೃದ್ಧಿ ಮಂಡಳಿ'ಯಾಗಿದೆ ಎಂದು ಕಿಡಿಗಾರಿದ್ದಾರೆ.
BJP is preparing for elections.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) July 12, 2022
-BJP MLAs get 28.5 Cr, Congress MLAs get 4 Cr for development in KKRDB
-Direct allocation to MLCs & MLAs in macro is against the rules.
-Why 5 Cr to a non functional hospital?
-Why 6Cr reserved?
KKRDB is now “BJP Development Board”
#40%ಸರ್ಕಾರ pic.twitter.com/AP1KgrTp39







