ಕೋಟ | ಪರೋಟ ವ್ಯವಹಾರದಲ್ಲಿ ನಷ್ಟ: ಸಾಲದ ಚಿಂತೆಯಲ್ಲಿ ವ್ಯಾಪಾರಿ ಆತ್ಮಹತ್ಯೆ
![ಕೋಟ | ಪರೋಟ ವ್ಯವಹಾರದಲ್ಲಿ ನಷ್ಟ: ಸಾಲದ ಚಿಂತೆಯಲ್ಲಿ ವ್ಯಾಪಾರಿ ಆತ್ಮಹತ್ಯೆ ಕೋಟ | ಪರೋಟ ವ್ಯವಹಾರದಲ್ಲಿ ನಷ್ಟ: ಸಾಲದ ಚಿಂತೆಯಲ್ಲಿ ವ್ಯಾಪಾರಿ ಆತ್ಮಹತ್ಯೆ](https://www.varthabharati.in/sites/default/files/images/articles/2022/07/12/342087-1657612795.jpeg)
ಕೋಟ, ಜು.12: ಪರೋಟ ವ್ಯಾಪಾರದಲ್ಲಿ ನಷ್ಟ ಉಂಟಾಗಿ ಸಾಲದ ಚಿಂತೆಯಲ್ಲಿ ವ್ಯಾಪಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.11ರಂದು ಸಂಜೆ ವೇಳೆ ನಡೆದಿರುವುದು ವರದಿಯಾಗಿದೆ.
ಮೃತರನ್ನು ಕಾರ್ಕಡ ಭಟ್ರಕಟ್ಟೆ ನಿವಾಸಿ ಸುಧಾಕರ ಪೂಜಾರಿ(43) ಎಂದು ಗುರುತಿಸಲಾಗಿದೆ. ಇವರು ಪರೋಟ ವ್ಯಾಪಾರ ಮಾಡಿಕೊಂಡಿದ್ದು, ಇದಕ್ಕೆ ದೊಡ್ಡ ಪ್ರಮಾಣದ ಬಂಡವಾಳ ಹೂಡಿದ್ದರು. ಕಳೆದ ಮೂರು ವರ್ಷಗಳಿಂದ ವ್ಯಾಪಾರ ಸರಿಯಾಗಿ ಆಗದೆ ನಷ್ಟ ಅನುಭವಿಸಿ, ಸಾಲದಿಂದ ತೊಂದರೆ ಅನುಭವಿಸುತ್ತಿದ್ದರೆನ್ನಲಾಗಿದೆ.
ಇದೇ ವಿಚಾರದಲ್ಲಿ ಮನನೊಂದ ಅವರು, ಪರೋಟ ಮಾಡುವ ಶೆಡ್ನ ಕಿಟಕಿಯ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story