ಉಡುಪಿಯಲ್ಲಿ ಎಸ್‌ಸಿಡಿಸಿಸಿ ಮೊಬೈಲ್ ಬ್ಯಾಂಕ್‌ಗೆ ಸ್ವಾಗತ
ಉಡುಪಿ, ಜು.೧೨: ಉಡುಪಿಯ ದೊಡ್ಡಣಗುಡ್ಡೆಯಲ್ಲಿ ಕಾರ್ಯಾರಂಭ ಮಾಡಲು ಇತ್ತೀಚೆಗೆ ಆಗಮಿಸಿದ ಎಸ್‌ಸಿಡಿಸಿಸಿ ಬ್ಯಾಂಕಿನ ಹೊಸ ಆವಿಷ್ಕಾರ ಮೊಬೈಲ್ ಬ್ಯಾಂಕಿಂಗ್ ಘಟಕವನ್ನು ಆಡಳಿತ ಮಂಡಳಿ ನಿರ್ದೇಶಕರು, ಗ್ರಾಮಸ್ಥರು ಮತ್ತು ಗ್ರಾಹಕರು ಸ್ವಾಗತಿಸಿದರು.
ಬಳಿಕ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು, ಬ್ಯಾಂಕಿನ ಸಾಧನೆ ಮತ್ತು ಮೊಬೈಲ್ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ನವೋದಯ ಸ್ವಸಹಾಯ ಗುಂಪಿನ ಸದಸ್ಯರುಗಳಿಗೆ ಸಮವಸ್ತ್ರವನ್ನು ವಿತರಿಸ ಲಾಯಿತು.
ಉಡುಪಿ ಲೀಡ್ ಬ್ಯಾಂಕ್ ಚೀಫ್ ಮೇನೇಜರ್ ಪಿ.ಎಂ.ಪಿಂಜಾರ್, ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ, ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಶುಭ ಹಾರೈಸಿದರು. ಬ್ಯಾಂಕಿನ ನಿರ್ದೇಶಕರಾದ ಬಿ. ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್ ಪಾಂಗಾಳ, ಉದ್ಯಮಿ ರಾಧಾ ಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಬ್ಯಾಂಕಿನ ಎ.ಜಿ.ಎಂ. ನಿತ್ಯಾನಂದ ಸೇರಿಗಾರ್ ಸ್ವಾಗತಿಸಿದರು. ಬ್ಯಾಂಕಿನ ಉಡುಪಿ ಶಾಖೆಯ ವ್ಯವಸ್ಥಾಪಕ ಸುನೀಲ್ ಕುಮಾರ್ ಎಸ್. ವಂದಿಸಿದರು. ಬ್ಯಾಂಕಿನ ಬ್ರಹ್ಮಾವರ ಶಾಖೆಯ ವ್ಯವಸ್ಥಾಪಕ ವರದರಾಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.