Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಪಠ್ಯ ಪುಸ್ತಕದಲ್ಲಿ ಸತ್ಯ ತಿರುಚುವ...

ಪಠ್ಯ ಪುಸ್ತಕದಲ್ಲಿ ಸತ್ಯ ತಿರುಚುವ ಪ್ರಯತ್ನ ಮಾಡಿದ್ದಾರೆ: ಡಾ.ಎಲ್.ಹನುಮಂತಯ್ಯ

ವಾರ್ತಾಭಾರತಿವಾರ್ತಾಭಾರತಿ12 July 2022 8:00 PM IST
share
ಪಠ್ಯ ಪುಸ್ತಕದಲ್ಲಿ ಸತ್ಯ ತಿರುಚುವ ಪ್ರಯತ್ನ ಮಾಡಿದ್ದಾರೆ: ಡಾ.ಎಲ್.ಹನುಮಂತಯ್ಯ

ಬೆಂಗಳೂರು, ಜು.12: ಬಿಜೆಪಿಯು ಶಾಲಾ ಪಠ್ಯ ಪುಸ್ತಕದಲ್ಲಿ ಟಿಪ್ಪು ಹಾಗೂ ಹೈದರಾಲಿ ಪಠ್ಯ ತೆಗೆಯುತ್ತೇವೆ ಎಂದು ಜನರಿಗೆ ನಂಬಿಸಿ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಕುವೆಂಪು ವಿಚಾರ ತಿರುಚುವ ಪ್ರಯತ್ನ ಮಾಡಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಟೀಕಿಸಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಕಂದಾಚಾರಗಳನ್ನು ವಿರೋಧಿಸುವ ದೃಷ್ಟಿಕೋನಗಳು ಬರಬೇಕು. ಆದರೆ ಈಗಿನ ಪಠ್ಯದಲ್ಲಿ ಯಜ್ಞಯಾಗಾದಿಗಳ ಪುನರ್ ಪ್ರತಿಷ್ಠಾಪಿಸುವ ಕೆಲಸ ಮಾಡಲಾಗಿದೆ ಎಂದು ದೂರಿದರು.

6ನೇ ತರಗತಿ ಸಮಾಜ ವಿಜ್ಞಾನದ ಹಳೆ ಪಠ್ಯದಲ್ಲಿ ಹೊಸ ಧರ್ಮಗಳ ಉದಯ ಎಂಬ ವಿಷಯವನ್ನು ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸಬಾರದೆಂದು ಸರಕಾರ ಆದೇಶ ಹೊರಡಿಸಿದೆ. 10ನೇ ತರಗತಿ ಪಠ್ಯದಲ್ಲಿ ಮಹಿಳಾ ನಿಂದನೆ ಅಂಶಗಳಿವೆ. ಬಸವಣ್ಣ ವೈದಿಕ ಮೌಢ್ಯಾಚರಣೆಗಳನ್ನು ವಿರೋಧಿಸಿದ್ದು, ದೇಹವೇ ದೇಗುಲ ಎಂದ ವಿಚಾರಗಳು, ವಚನಕಾರರ ಅಂಶಗಳನ್ನು ಈ ಪರಿಷ್ಕರಣೆಯಲ್ಲಿ ಕೈಬಿಡಲಾಗಿದೆ ಎಂದು ಅವರು ಹೇಳಿದರು.

ವೀರಶೈವ ಧರ್ಮ ಅಭಿವೃದ್ಧಿಪಡಿಸಿದವರು ಎಂದು ಹೇಳಲಾಗಿದೆ. ಅವರು ಲಿಂಗಾಯತ ಧರ್ಮ ಸ್ಥಾಪಿಸಿದವರೇ ಹೊರತು, ವೀರಶೈವ ಧರ್ಮವನ್ನು ಅಭಿವೃದ್ಧಿ ಪಡಿಸಲಿಲ್ಲ. ಸರಕಾರ ಬಸವಣ್ಣನವರ ವಿಚಾರ ಪರಿಷ್ಕರಿಸುತ್ತೇವೆ ಎಂದು ಹೇಳಿದೆಯೇ ಹೊರತು ಯಾವ ವಿಚಾರವನ್ನು ಎಂದು ಹೇಳಿಲ್ಲ. ಪಠ್ಯದಲ್ಲಿರುವ ವಿಚಾರವನ್ನು ಶಿಕ್ಷಕರು ಮಕ್ಕಳಿಗೆ ಹೇಳಬೇಕೆ ಅಥವಾ ಬಸಣ್ಣನವರ ನಿಜವಾದ ವಿಚಾರಗಳನ್ನು ಹೇಳಬೇಕೆ ಎಂದು ಅವರು ಪ್ರಶ್ನಿಸಿದರು. 

ನಾರಾಯಣಗುರು ಅವರನ್ನು ವೈದಿಕ, ಸಂಸ್ಕøತ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ್ದರು ಎಂದು ಹೇಳಲಾಗಿದೆ. ಆದರೆ ಅವರು ಒಂದು ದೈವ, ಒಂದು ಜಾತಿ, ಒಂದು ಧರ್ಮ ಎಂದು ಹೋರಾಟ ಮಾಡಿದವರು. ಅವರು ಪ್ರತಿಪಾದನೆ ಮಾಡದ ವಿಚಾರವನ್ನು ಪಠ್ಯದಲ್ಲಿ ತಿಳಿಸಲಾಗಿದೆ ಎಂದು ಹನುಮಂತಯ್ಯ ತಿಳಿಸಿದರು.

ಅಂಬೇಡ್ಕರ್ ಅವರನ್ನು ‘ಸಂವಿಧಾನ ಶಿಲ್ಪಿ’ ಎಂದು ಹೇಳುವುದನ್ನು ಸಹಿಸಲಾಗದೇ ಇರುವ ಮನಸ್ಥಿತಿಗಳಿರುವುದು ಅಪಾಯಕಾರಿ. ಪಠ್ಯ ಪುಸ್ತಕದಲ್ಲಿ ಹಿಂದೂಗಳ ಮೇಲೆ ನಡೆದ ಹತ್ಯಾಕಾಂಡವನ್ನು ಮಕ್ಕಳ ಪಠ್ಯದಲ್ಲಿ ಸೇರಿಸಬೇಕು ಎಂಬ ಒತ್ತಡ ಹಾಕಲಾಗಿದೆ. ಅನೇಕ ಬೌದ್ಧ ಸ್ತೂಪಗಳನ್ನು ಶಂಕರಾಚಾರ್ಯರು ಒಡೆದು ಹಾಕಿದ್ದಾರೆ ಎಂದು ಸೇರಿಸಬೇಕಲ್ಲವೇ? ಎಂದು ಅವರು ಪ್ರಶ್ನಿಸಿದರು.

ಮುಸಲ್ಮಾನರು, ಕ್ರೈಸ್ತರು ತಮ್ಮ ಮೇಲೆ ನಡೆದಿರುವ ದೌರ್ಜನ್ಯವನ್ನು ಪಠ್ಯದಲ್ಲಿ ಸೇರಿಸಿ ಎಂದು ಕೇಳುವುದಿಲ್ಲವೆ. ದಲಿತರ ಮೇಲೆ ಹಿಂದೂಗಳೇ ನಡೆಸಿರುವ ಹತ್ಯಾಕಾಂಡಗಳನ್ನು ಪಠ್ಯದಲ್ಲಿ ಸೇರಿಸಬೇಕಾಗುವುದಿಲ್ಲವೇ? ಇವರ ಪ್ರಕಾರ ಕಾಶ್ಮೀರ ಪಂಡಿತರು ಮಾತ್ರ ಹಿಂದೂಗಳೇ? ದಲಿತರು ಹಿಂದೂಗಳಲ್ಲವೇ? ನಮ್ಮ ಪಠ್ಯಗಳು ಹತ್ಯಾಕಾಂಡಗಳ ಸರಪಳಿಯಾಗುತ್ತವೆ. ನಮ್ಮ ಮಕ್ಕಳಿಗೆ ಇದನ್ನು ಕಲಿಸಬೇಕಾ? ಎಂದು ಹನುಮಂತಯ್ಯ ಕಿಡಿಗಾರಿದರು.

ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಮಾತನಾಡಿ, ಶಿಕ್ಷಣ ಸಚಿವರು ಮಕ್ಕಳಿಗೆ ಆರೋಗ್ಯಕರ ಚಿಂತನೆ ಬರುವ ಅಂಶವನ್ನು ಮಾತ್ರ ಹೇಳಬೇಕು ಎಂದು ಹೇಳಿದ್ದಾರೆ. ಹಿಂದೂಗಳ ಹತ್ಯಾಕಾಂಡವನ್ನು ಪಠ್ಯದಲ್ಲಿ ಸೇರಿಸುವುದು ಮಕ್ಕಳಲ್ಲಿ ಆರೋಗ್ಯಕರ ಚಿಂತನೆ ರೂಪಿಸುತ್ತದೆಯೇ? ಕುವೆಂಪು ಅವರನ್ನು ಒಂದು ಜಾತಿಯ ವ್ಯಕ್ತಿಯನ್ನಾಗಿ ಮಾಡಲು ಮುಂದಾಗಿದ್ದಾರೆ. ಕುವೆಂಪು ಮೌಢ್ಯ, ಅಜ್ಞಾನವನ್ನು ನೇರವಾಗಿ ವಿರೋಧಿಸಿ, ವೈಜ್ಞಾನಿಕ ದೃಷ್ಟಿಗೆ ಆದ್ಯತೆ ನೀಡಿದ್ದರು ಎಂದು ತಿಳಿಸಿದರು. 

ಗಣಿತ ಹಾಗೂ ವಿಜ್ಞಾನದ ಬಗ್ಗೆ ಸಮಿತಿಯಲ್ಲಿ ಆಕ್ಷೇಪಗಳಿದ್ದು, ನ್ಯೂಟನ್ ಮೇಲೆ ಸೇಬು ಬಿದ್ದ ಕಾರಣ ಗುರುತ್ವಾಕರ್ಷಣದ ಬಗ್ಗೆ ತಿಳಿಯಿತು ಎಂಬುದಕ್ಕೆ ಪುರಾವೆಗಳೇ ಇಲ್ಲ ಎಂದು ಹೇಳಲಾಗಿದೆ. ನ್ಯೂಟನ್, ಐನ್ಸ್‍ಸ್ಟೈನ್ ವಿಚಾರವನ್ನೇ ಪ್ರಶ್ನಿಸುತ್ತಿದ್ದಾರೆ. ಪೈಥಾಗರಸ್ ಸಿದ್ಧಾಂತವನ್ನು ವಿರೋಧಿಸಿದ್ದಾರೆ ಎಂದು ಚಂದ್ರಶೇಖರ್ ಹೇಳಿದರು.

ಪಠ್ಯ ಪುಸ್ತಕವಲ್ಲ, ಆರೆಸೆಸ್ಸ್ ಗೈಡ್

ಹೆಗಡೆವಾರ್ ಭಾಷಣ ವ್ಯಕ್ತಿಪೂಜೆಗೆ ಸೀಮಿತವಾಗಿದೆ. ನೀವು ಒಬ್ಬರನ್ನು ಒಪ್ಪಿದ ಮೇಲೆ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಇದು ಪಠ್ಯ ಪುಸ್ತಕವಲ್ಲ. ಆರೆಸೆಸ್ಸ್, ಬಿಜೆಪಿಯ ಗೈಡ್ ಪುಸ್ತಕವಾಗಿದೆ. ಇದರ ವಿರುದ್ಧ ನಾವು ಶಾಂತಿಯುತ ಹೋರಾಟವನ್ನು ಮುಂದುವರಿಸಲೇಬೇಕು.

-ಪ್ರೊ.ಬಿ.ಕೆ.ಚಂದ್ರಶೇಖರ್ ಮಾಜಿ ಶಿಕ್ಷಣ ಸಚಿವ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X