ಪಂಜಿಕಲ್ಲು ದುರಂತ: ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಧನದ ಚೆಕ್ ವಿತರಣೆ

ಬಂಟ್ವಾಳ, ಜು.12: ತಾಲೂಕಿನ ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ಜು.4ರಂದು ಗುಡ್ಡ ಜರಿದು ಮೃತಪಟ್ಟ ಕೇರಳದ ಮೂವರು ಕಾರ್ಮಿಕರ ಕುಟುಂಬಕ್ಕೆ ಸರಕಾರದ ವತಿಯಿಂದ ತಲಾ 5 ಲಕ್ಷ ರೂ. ನಂತೆ ಪರಿಹಾರದ ಚೆಕ್ ಅನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಗಳವಾರ ವಿತರಿಸಿದರು.
ಘಟನೆಯಿಂದ ಮೃತಪಟ್ಟ ಬಿಜು ಪಾಲಕ್ಕಡ್, ಸಂತೋಷ್ ಅಲಪುರ, ಬಾಬು ಕೊಟ್ಟಾಯಂ ಅವರ ಕುಟುಂಬ ಸದಸ್ಯರನ್ನು ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಕಂದಾಯ ಸಚಿವ ಆರ್.ಆಶೋಕ್, ಸಚಿವರಾದ ಎಸ್.ಆಂಗಾರ, ಸುನಿಲ್ ಕುಮಾರ್, ಸಿ.ಸಿ.ಪಾಟೀಲ್ , ಶಾಸಕರಾದ ರಾಜೇಶ್ ನಾಯ್ಕ್, ಸಂಜೀವ ಮಠಂದೂರು, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ವಿಭಾಗಾಧಿಕಾರಿ ಮದನ್ ಮೋಹನ್, ಸಿಒ ಡಾ. ಕುಮಾರ್, ಮಾಜಿ ಸಚಿವ ಪ್ರಮೋದ್ ಮದ್ವರಾಜ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.
Next Story




.jpeg)


