ಮುಂದ್ರಾ ಬಂದರಿನಲ್ಲಿ 350 ಕೋಟಿ ರೂ.ಗೂ ಅಧಿಕ ಮೌಲ್ಯದ 70 ಕೆ.ಜಿ.ಹೆರಾಯಿನ್ ವಶ

ಅಹ್ಮದಾಬಾದ್,ಜು.12: ಕಛ್ ನ ಮುಂದ್ರಾ ಬಂದರಿನ ಸಮೀಪ ಕಂಟೇನರ್ವೊಂದರಿಂದ 350 ಕೋ.ರೂ.ಗೂ ಅಧಿಕ ವೌಲ್ಯದ 70 ಕೆ.ಜಿ.ಹೆರಾಯಿನ್ ಅನ್ನು ಗುಜರಾತ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ವು ವಶಪಡಿಸಿಕೊಂಡಿದೆ ಎಂದು ಸುದ್ದಿಸಂಸ್ಥೆಯು ಮಂಗಳವಾರ ವರದಿ ಮಾಡಿದೆ.
ಶಿಪ್ಪಿಂಗ್ ಬಿಲ್ ಗಳಲ್ಲಿ ಮತ್ತು ಕಸ್ಟಮ್ಸ್ ಗೆ ನೀಡಿದ ವಿವರಗಳಲ್ಲಿ ಕಂಟೇನರ್ ಜವಳಿಯನ್ನು ಒಳಗೊಂಡಿದೆ ಎಂದು ಹೇಳಲಾಗಿತ್ತು. ಆದಾಗ್ಯೂ ಗುಪ್ತಚರ ಮಾಹಿತಿಯ ಮೇರೆಗೆ ಎಟಿಎಸ್ ಕಂಟೇನರ್ನ್ನು ಶೋಧಿಸಿದಾಗ ಒಳಗಡೆ ಬಚ್ಚಿಟ್ಟಿದ್ದ ಹೆರಾಯಿನ್ ಪತ್ತೆಯಾಗಿತ್ತು. ಪಶ್ಚಿಮ ಏಷ್ಯಾದಿಂದ ಆಗಮಿಸಿದ್ದ ಕಂಟೇನರ್ ಅನ್ನು ಬಂದರು ಸಮೀಪದ ನಿಗದಿತ ತಾಣದಲ್ಲಿ ಇರಿಸಲಾಗಿತ್ತು ಎಂದು ವರದಿಯು ತಿಳಿಸಿದೆ.
Next Story





