ಐಸಿಸಿ ಏಕದಿನ ರ್ಯಾಂಕಿಂಗ್: ಪಾಕಿಸ್ತಾನವನ್ನು ಹಿಂದಿಕ್ಕಿದ ಭಾರತ

Photo:PTI
ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳ ಭರ್ಜರಿ ಜಯದ ನಂತರ ಭಾರತವು ಹೊಸ ಐಸಿಸಿ ಏಕದಿನ ಟೀಮ್ ರ್ಯಾಂಕಿಂಗ್ನಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿದೆ.
ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ 105 ರೇಟಿಂಗ್ ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದ ಭಾರತ 108 ರೇಟಿಂಗ್ ಪಾಯಿಂಟ್ಗಳೊಂದಿಗೆ ಮೂರನೇ ಸ್ಥಾನಕ್ಕೆ ತಲುಪಿದ್ದು, ಪಾಕಿಸ್ತಾನವನ್ನು(106 ರೇಟಿಂಗ್ ಪಾಯಿಂಟ್) ಹಿಂದಿಕ್ಕಿದೆ.
ನ್ಯೂಝಿಲ್ಯಾಂಡ್ 126 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 122 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಮಂಗಳವಾರ ಜಸ್ಪ್ರೀತ್ ಬುಮ್ರಾ ಅವರ (6-19)ಅಮೋಘ ಬೌಲಿಂಗ್ ಗೆ ತತ್ತರಿಸಿದ ಇಂಗ್ಲೆಂಡ್ ಏಕದಿನದಲ್ಲಿ ಭಾರತದ ವಿರುದ್ಧ ಕಡಿಮೆ ಮೊತ್ತಕ್ಕೆ (110 ರನ್) ಕುಸಿಯಿತು. ಮುಹಮ್ಮದ್ ಶಮಿ ಮೂರು ಹಗೂ ಪ್ರಸಿದ್ಧ್ ಕೃಷ್ಣ ಒಂದು ವಿಕೆಟ್ ಪಡೆದರು.
ಇದಕ್ಕೆ ಉತ್ತರವಾಗಿ ಭಾರತ ನಾಯಕ ರೋಹಿತ್ ಶರ್ಮಾ(ಔಟಾಗದೆ 76) ಹಾಗೂಶಿಖರ್ ಧವನ್(ಔಟಾಗದೆ 31)ಮೊದಲ ವಿಕೆಟ್ ಗೆ ಸೇರಿಸಿದ 114 ರನ್ ಜೊತೆಯಾಟದಿಂದ ಭರ್ಜರಿ ಗೆಲುವು ದಾಖಲಿಸಿತು. 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.