ಶ್ರೀಲಂಕಾ: ರಾಷ್ಟ್ರೀಯ ದೂರದರ್ಶನ ಕೇಂದ್ರದೊಳಗೆ ನುಗ್ಗಿದ ಪ್ರತಿಭಟನಾಕಾರರು: ಪ್ರಸಾರ ಸ್ಥಗಿತ

Photo:ANI
ಕೊಲಂಬೊ: ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ದೇಶದಿಂದ ಪಲಾಯನ ಮಾಡಿದ್ದಾರೆ ಎಂಬ ಸುದ್ದಿ ಹೊರಬಿದ್ದ ಕೆಲವೇ ಗಂಟೆಗಳ ನಂತರ ಶ್ರೀಲಂಕಾದಲ್ಲಿ ಬೀದಿಗಳಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದಿವೆ.
ಪ್ರತಿಭಟನಾಕಾರರು ಟಿವಿ ಸ್ಟೇಷನ್ ಕಚೇರಿ ಆವರಣದೊಳಗೆ ಪ್ರವೇಶಿಸಿದ ನಂತರ ಶ್ರೀಲಂಕಾದ ರಾಷ್ಟ್ರೀಯ ದೂರದರ್ಶನ ನೆಟ್ವರ್ಕ್ ರೂಪವಾಹಿನಿ ತನ್ನ ಪ್ರಸಾರವನ್ನು ಸ್ಥಗಿತಗೊಳಿಸಿತು.
ಹೋರಾಟವು ಮುಗಿಯುವವರೆಗೂ ಶ್ರೀಲಂಕಾ ರೂಪವಾಹಿನಿಯು ಕೆಲವು ಕಾರ್ಯಕ್ರಮಗಳನ್ನು ಮಾತ್ರ ಪ್ರಸಾರ ಮಾಡುತ್ತದೆ ಎಂದು ಪ್ರತಿಭಟನಾಕಾರರು ನೇರ ಪ್ರಸಾರದಲ್ಲಿ ಹೇಳಿದರು.
ಕೊಲಂಬೊದಲ್ಲಿರುವ ಅಮೆರಿಕದ ರಾಯಭಾರ ಕಚೇರಿಯು ಎರಡು ದಿನಗಳ ಕಾಲ ಕಾನ್ಸುಲರ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಈ ನಿರ್ಧಾರವನ್ನು "ಹೆಚ್ಚಿನ ಎಚ್ಚರಿಕೆಯಿಂದ" ತೆಗೆದುಕೊಳ್ಳಲಾಗಿದೆ ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ಸ್ಪೀಕರ್ ಅವರಿಂದ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಪ್ರತಿಭಟನೆಗಳು ಹೆಚ್ಚಾಗುತ್ತಿದ್ದಂತೆ ದ್ವೀಪ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.