‘ನಮ್ಮ ಕಸ ನಮ್ಮ ಜವಾಬ್ದಾರಿ’ ಕಿರುಚಿತ್ರ ಬಿಡುಗಡೆ
ಮಂಗಳೂರು : ಕಿರು ಚಲನಚಿತ್ರದ ಮೂಲಕ ಸಾಮಾಜಿಕ ಸಮಸ್ಯೆಯನ್ನು ಭಿನ್ನವಾಗಿ ಚಿತ್ರಿಸಲು ಸಾಧ್ಯವಿದೆ ಎಂದು ಮಂಗಳೂರು ತಾಪಂ ಇಒ ಎನ್.ಜಿ. ನಾಗರಾಜ್ ಅಭಿಪ್ರಾಯಪಟ್ಟರು.
ಸ್ವಚ್ಛ ಭಾರತ್ ಮಿಷನ್ (ಗ್ರಾ) ಸಹಯೋಗದಲ್ಲಿ ಋಷಿ ಫಿಲ್ಮ್ಸ್ ತಯಾರಿಸಿದ ‘ನಮ್ಮ ಕಸ ನಮ್ಮ ಜವಾಬ್ದಾರಿ’ ಕಿರುಚಿತ್ರವನ್ನು ಮಂಗಳೂರು ತಾಪಂ ಸಭಾಂಗಣದಲ್ಲಿ ಬುಧವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮನುಷ್ಯ ಎದುರಿಸುತ್ತಿರುವ ಸವಾಲು ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವ ಆಲೋಚನೆಗಳನ್ನು ಕಿರುಚಿತ್ರದ ಕಥಾವಸ್ತುವಾಗಿ ಬಳಸಿಕೊಳ್ಳಲಾಗಿದೆ ಎಂದು ನಿರ್ಮಾಪಕ ಆ್ಯಂಟನಿ ಪೀಟರ್ ಕುವೆಲ್ಲೊ ಹೇಳಿದರು.
ಚಲನಚಿತ್ರ ನಿರ್ದೇಶಕ ಇಸ್ಮಾಯೀಲ್ ಮೂಡುಶೆಡ್ಡೆ, ಮುಲ್ಕಿ-ಮೂಡುಬಿದಿರೆ ತಾಪಂ ಇಒ ದಯಾವತಿ, ಸ್ವಚ್ಛ ಭಾರತ್ ಮಿಷನ್ ಸಂಯೋಜಕ ಡೊಂಬಯ್ಯ ಇಡ್ಕಿದು, ಕಿನ್ಯಾ ಪಿಡಿಒ ವಿಶ್ವನಾಥ್, ಕಿಲ್ಪಾಡಿ ಪಿಡಿಒ ಪೂರ್ಣಿಮಾ, ಬೋಳಿಯಾರು ಪಿಡಿಒ ಕೃಷ್ಣಕುಮಾರ್ ಉಪಸ್ಥಿತರಿದ್ದರು.
Next Story





