ಸೊರಬ ಪಟ್ಟಣ ಪಂಚಾಯತ್ ನಿಂದ ಬೀದಿಬದಿ ಅಂಗಡಿಗಳ ತೆರವು ಕಾರ್ಯಾಚರಣೆ: ಆತ್ಮಹತ್ಯೆಗೆ ಯತ್ನಿಸಿದ ವ್ಯಾಪಾರಿ

ಶಿವಮೊಗ್ಗ: ಬೀದಿಬದಿ ವ್ಯಾಪಾರಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸೊರಬ ತಾಲೂಕಿನ ಆನವಟ್ಟಿ ಪಟ್ಟಣದಲ್ಲಿ ನಡೆದಿದೆ.
ವೀರಭದ್ರಪ್ಪ ಶಂಕ್ರಪ್ಪ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬೀದಿಬದಿ ವ್ಯಾಪಾರಿ ಎಂದು ತಿಳಿದು ಬಂದಿದೆ.
ಪಟ್ಟಣ ಪಂಚಾಯತ್ ಅಧಿಕಾರಿಗಳು ಬೀದಿಬದಿ ವ್ಯಾಪಾರಸ್ಥರ ತಳ್ಳುಗಾಡಿಗಳನ್ನು ತೆರವುಗೊಳಿಸಿ, ಕಬ್ಬಿನ ಗಾಡಿಯನ್ನು ಜೆಸಿಬಿ ಯಂತ್ರದ ಮೂಲಕ ಜಖಂಗೊಳಿಸಿದ ಹಿನ್ನಲೆಯಲ್ಲಿ ವೀರಭದ್ರಪ್ಪ ಶಂಕ್ರಪ್ಪ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಮಳೆಗಾಲದಲ್ಲಿ ತೆರವುಗೊಳಿಸಬೇಡಿ ಎಂದು ಸೊರಬ ಶಾಸಕ ಕುಮಾರ ಬಂಗಾರಪ್ಪಗೆ ಮನವಿ ಮಾಡಿದ್ದರು. ಆದರೂ ಕೂಡ ಪಟ್ಟಣ ಪಂಚಾಯತ್ ಅಧಿಕಾರಿಗಳು ಏಕಾಏಕಿ ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸದ್ಯ ಅಸ್ವಸ್ಥಗೊಂಡಿರುವ ಬೀದಿಬದಿ ವ್ಯಾಪಾರಿ ವೀರಭದ್ರಪ್ಪ ಶಂಕ್ರಪ್ಪನನ್ನು ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
A street vendor drank poison & attempted suicide in Shivmogga after corporation officials came in with JCBs & razed structures & pushcarts used by him & few others after terming them as encroachments. He has been rushed to a hospital for treatment. pic.twitter.com/JrIDzA95f9
— Deepak Bopanna (@dpkBopanna) July 13, 2022







