ಬಾಳಾ ಠಾಕ್ರೆಗೆ ಶ್ರದ್ಧಾಂಜಲಿ ಸಲ್ಲಿಸಿದ ಏಕನಾಥ ಶಿಂದೆ

ಮುಂಬೈ, ಜು. ೧೩: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ‘ಗುರುಪೂರ್ಣಿಮಾ’ ದಿನವಾದ ಬುಧವಾರ ಮುಂಬೈಯಲ್ಲಿರುವ ಶಿವಸೇನೆಯ ಸ್ಥಾಪಕ ಬಾಳಾ ಠಾಕ್ರೆ ಅವರ ಸ್ಮಾರಕಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಳಾ ಠಾಕ್ರೆಯವರ ಆಶೀರ್ವಾದದಿಂದ ಸಾಮಾನ್ಯ ಮನುಷ್ಯನಾದ ತಾನು ರಾಜ್ಯದ ಅತ್ಯುಚ್ಛ ಸ್ಥಾನಕ್ಕೆರಲು ಸಾಧ್ಯವಾಯಿತು ಎಂದರು.
‘‘ರಾಜ್ಯದಲ್ಲಿ ಎಲ್ಲಾ ದಿಶೆಯಲ್ಲಿ ಅಭಿವೃದ್ಧಿ ಕೈಗೊಳ್ಳಲು ನನ್ನ ಸರಕಾರ ಬದ್ಧವಾಗಿದೆ’’ ಎಂದು ಅವರು ಹೇಳಿದರು.
ತಾನು ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇನೆ. ರಾಜ್ಯದ ವಿವಿಧ ಸ್ಥಳಗಳಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಉದ್ಭವಿಸಿರುವ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.
ಅನಂತರ ಅವರು ಶಿವಸೇನೆ ನಾಯಕ ಹಾಗೂ ತನ್ನ ಮಾರ್ಗದರ್ಶಕ ಆನಂದ್ ದಿಘೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಅವರ ಸ್ಮಾರಕ ಇರುವ ಸಮೀಪದ ಥಾಣೆ ನಗರಕ್ಕೆ ತೆರಳಿದರು.
Next Story





