ಗುಡ್ಡ ಏರಿ ಹಾನಿ ಪ್ರದೇಶ ಪರಿಶೀಲನೆ ನಡೆಸಿದ ರಮಾನಾಥ ರೈ

ಬಂಟ್ವಾಳ, ಜು.13: ನಿರಂತರ ಮಳೆಯಿಂದ ತಾಲೂಕಿನ ಬಡಗಕಜೆಕಾರು ಮತ್ತು ತೆಂಕಜೆಕರು ಗ್ರಾಮದ ಗುಂಡಿದೋಟ್ಟು ಎಂಬಲ್ಲಿ ಗುಡ್ಡ ಕುಸಿದು ಕೃಷಿ, ಮನೆ ಹಾನಿಗೊಂಡ ಪ್ರದೇಶಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಾನಿಗೊಂಡ ಪ್ರದೇಶವನ್ನು ವೀಕ್ಷಿಸಲು ರಮಾನಾಥ ರೈ ಅವರು ಕಡಿದಾದ ಗುಡ್ಡ ಏರಿವ ಮೂಲಕ ಸುದ್ದಿಯಾದರು. ಪರಿಶೀಲನೆ ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಉಪಾಧ್ಯಕ್ಷ ಸುಧಾಕರ್ ಶಣೈ, ಗ್ರಾಪಂ ಅಧ್ಯಕ್ಷೆ ಅಸ್ಮಾ, ಉಪಾಧ್ಯಕ್ಷ ಡಿಕಯ್ಯ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
Next Story