ವಿಟ್ಲ: ರಸ್ತೆ ಬದಿಯಲ್ಲಿ ಅಪಾಯಕಾರಿ ಮರಗಳು!
ಸ್ಥಳೀಯರು, ವಾಹನ ಸವಾರರಲ್ಲಿ ಆತಂಕ; ತೆರವಿಗೆ ಆಗ್ರಹ

ವಿಟ್ಲ: ಪಟ್ಟಣದಿಂದ ಸಾಲೆತ್ತೂರಿಗೆ ತೆರಳುವ ಮಾರ್ಗದಲ್ಲಿರುವ ಪಟ್ಟಣ ಪಂಚಾಯತ್ ವ್ಯಾಪ್ತಿಯ ನೀರಕ್ಕಣಿ ಸಮೀಪದಲ್ಲಿ ರಸ್ತೆಗೆ ವಾಲಿಕೊಂಡಿರುವ ಬೃಹತ್ ಗಾತ್ರದ ಮರಗಳು ಸ್ಥಳೀಯರು ಹಾಗೂ ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.
ಈ ಸಂಬಂಧ ಬುಧವಾರ ಎಸ್ ಡಿಟಿಯು ಹಾಗೂ ರಿಕ್ಷಾ ಚಾಲಕರ ನಿಯೋಗವೊಂದು ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಗೋಪಾಲ ನಾಯ್ಕ್ ಅವರಿಗೆ ಮನವಿ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಇಲ್ಲಿನ ರಸ್ತೆಯಲ್ಲಿ ಶಾಲಾ ಮಕ್ಕಳ ವಾಹನ ಸೇರಿ ಹಲವು ವಾಹನಗಳು ದಿನ ನಿತ್ಯ ಸಂಚರಿಸುತ್ತದೆ. ಆದ್ದರಿಂದ ರಸ್ತೆಗೆ ವಾಲಿದ ಮರಗಳನ್ನು ತೆರವುಗೊಳಿಸುವ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಎಸ್ ಡಿಟಿಯು ವಿಟ್ಲ ಸಮಿತಿ ಅಧ್ಯಕ್ಷ ಝಕರಿಯಾ ಕಡಂಬು, ಕಾರ್ಯದರ್ಶಿ ಮುಫ್ತಿ ಮುಹಮ್ಮದ್ ಹಾಗೂ ಜಾಯ್ಸನ್ ಇದ್ದರು.
-----------------------------------------------------------------------------
ಈ ಅಪಾಯಕಾರಿ ಮರಗಳು ಮಳೆ- ಗಾಳಿಗೆ ಯಾವುದೇ ಕ್ಷಣದಲ್ಲಿ ಬೀಳುವ ಸಾಧ್ಯತೆ ಇದೆ. ಶಾಲಾ ಮಕ್ಕಳು ಸೇರಿದಂತೆ ನೂರಾರು ಜನರು ಓಡಾಡುವ ಈ ರಸ್ತೆಯಲ್ಲಿ ಅವಘಡ ಸಂಭವಿಸುವ ಮೊದಲು ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಂಡರೆ ಒಳಿತು. ಈ ಕುರಿತು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅವರಿಗೆ ಮನವಿ ಮಾಡಿದ್ದೇವೆ. ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿಗಳು ಭರವಸೆ ನೀಡಿದರು.
-ಝಕರಿಯಾ ಕಡಂಬು, ಅಧ್ಯಕ್ಷರು ಎಸ್ ಡಿಟಿಯು- ವಿಟ್ಲ ಹಾಗೂ ರಿಕ್ಷಾ ಚಾಲಕರು






.jpeg)




