ಹಾಂಕಾಂಗ್: ‘ವಾಂಗ್ ಅಜ್ಜಿ’ಗೆ ಜೈಲುಶಿಕ್ಷೆ
ಹಾಂಕಾಂಗ್, ಜು.13: ಹಾಂಕಾಂಗ್ನಲ್ಲಿ ಪ್ರಜಾಪ್ರಭುತ್ವಕ್ಕೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ‘ವಾಂಗ್ ಅಜ್ಜಿ’ ಎಂದೇ ಹೆಸರಾಗಿದ್ದ 75 ವರ್ಷದ ಅಲೆಕ್ಸಾಂಡ್ರಾ ವಾಂಗ್ಗೆ ಅಲ್ಲಿನ ನ್ಯಾಯಾಲಯ 8 ತಿಂಗಳ ಜೈಲುಶಿಕ್ಷೆ ವಿಧಿಸಿದೆ. ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ಬ್ರಿಟನ್ನ ರಾಷ್ಟ್ರಧ್ವಜ ಬೀಸುತ್ತಾ ವಾಂಗ್ ಹಾಜರಿರುತ್ತಿದ್ದರು.
ಅಲ್ಲಿ ಅವರು ಬಳಸುತ್ತಿದ್ದ ಆಕ್ರಮಣಕಾರಿ ಪದಗಳು, ಘೋಷಣೆಗಳು ಅಕ್ರಮವಾಗಿ ಜನ ಗುಂಪುಗೂಡಲು ಪ್ರೇರಣೆ ನೀಡುತ್ತಿತ್ತು. ಅಲ್ಲದೆ ಬ್ರಿಟನ್ ಧ್ವಜ ಬೀಸುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಪ್ರಯತ್ನಿಸಿದ್ದರು. 2019ರ ಆಗಸ್ಟ್ 11ರಂದು 2 ಕಾನೂನುಬಾಹಿರ ಪ್ರತಿಭಟನೆಯಲ್ಲಿ ಅವರು ಪಾಲ್ಗೊಂಡಿರುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಶಿಕ್ಷೆ ಪ್ರಕಟಿಸಿದ ನ್ಯಾಯಾಧೀಶರು ಘೋಷಿಸಿದ್ದಾರೆ.
Next Story