ಶ್ರೀಲಂಕಾ ಅಧ್ಯಕ್ಷ ಗೊತಬಯ ರಾಜಪಕ್ಸ ಇಂದು ಮಾಲ್ಡೀವ್ಸ್ ನಿಂದ ಸಿಂಗಾಪುರಕ್ಕೆ ತೆರಳುವ ನಿರೀಕ್ಷೆ

Photo:twitter
ಹೊಸದಿಲ್ಲಿ: ಬುಧವಾರ ಮಾಲ್ಡೀವ್ಸ್ಗೆ ಪಲಾಯನ ಮಾಡಿದ್ದ ಶ್ರೀಲಂಕಾ ಅಧ್ಯಕ್ಷ ಗೊತಬಯ ರಾಜಪಕ್ಸ ಅವರು ಶ್ರೀಲಂಕಾದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟಿನ ನಡುವೆ ಇಂದು ಸಿಂಗಾಪುರಕ್ಕೆ ತೆರಳುವ ನಿರೀಕ್ಷೆಯಿದೆ.
ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ನೇಮಕ ಮಾಡುವ ರಾಜಪಕ್ಸ ಅವರ ನಿರ್ಧಾರವು ಹೆಚ್ಚಿನ ಪ್ರತಿಭಟನೆಗೆ ಕಾರಣವಾಯಿತು.
ಶ್ರೀಲಂಕಾ ಪ್ರಜೆಗಳ ಪ್ರತಿಭಟನೆಗೆ ಬೆದರಿದ ಅಧ್ಯಕ್ಷ ರಾಜಪಕ್ಸೆ ತನಗೆ ಸಿಂಗಾಪುರಕ್ಕೆ ತೆರಳಲು ಖಾಸಗಿ ಜೆಟ್ ವ್ಯವಸ್ಥೆ ಮಾಡುವಂತೆ ಮಾಲ್ಡೀವ್ಸ್ ಸರಕಾರಕ್ಕೆ ಮನವಿ ಮಾಡಿದ್ದಾರೆ ಎಂದು ಮಾಲ್ಡೀವ್ಸ್ನ ಸರಕಾರಿ ಮೂಲಗಳು ತಿಳಿಸಿವೆ.
Next Story