ಮಂಗಳೂರು | ಭಾರೀ ಗಾಳಿಗೆ ಹಾರಿಬಿದ್ದ ತಗಡಿನ ಶೀಟು: ಆರು ಕಾರುಗಳಿಗೆ ಹಾನಿ

ಮಂಗಳೂರು, ಜು.14: ನಗರದಲ್ಲಿ ಗುರುವಾರ ಮಧ್ಯಾಹ್ನ ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಗಣೇಶ್ ಮಹಲ್ ಹೋಟೆಲ್ ನ ಎದುರಿನ ತಗಡಿನ ಶೀಟು ಬಿದ್ದು ಕಾರುಗಳಿಗೆ ಹಾನಿಯಾಗಿದೆ.
ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ಶೀಟು ಹಾರಿ ಬಿದ್ದಿದ್ದು, ಅಲ್ಲಿ ನಿಲ್ಲಿಸಿದ್ದ ಆರು ಕಾರುಗಳಿಗೆ ಹಾನಿಯಾಗಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ.