ಎಸ್.ವೈ.ಎಸ್ ಕಿನ್ಯ ಸೆಂಟರ್‌ನಿಂದ ಈದ್ ಸ್ನೇಹ ಕೂಟ

ಮಂಗಳೂರು, ಜು.14: ಎಸ್.ವೈ.ಎಸ್. ರಾಜ್ಯ ಸಮಿತಿ ತೀರ್ಮಾನದಂತೆ ರಾಜ್ಯಾದ್ಯಂತ ಎಲ್ಲಾ ಸೆಂಟರ್ ಗಳಲ್ಲಿ ಬಕ್ರೀದ್ ಪ್ರಯುಕ್ತ ನಡೆಯುವ ಈದ್ ಸ್ನೇಹ ಕೂಟವು ಕಿನ್ಯ ಸೆಂಟರ್ ನಲ್ಲಿ ಆಯೋಜಿಸಲಾಯಿತು .ವಿವಿಧ ಧರ್ಮದ ನಾಯಕರ ಸಂಗಮದಲ್ಲಿ ಸಯ್ಯಿದ್ ಇಬ್ರಾಹೀಂ ಬಾತಿಷಾ ತಂಙಳ್ ಅಲ್ ಬುಖಾರಿ ಆನೆಕಲ್ಲು ಅವರ ಪ್ರಾರ್ಥನೆಯೊಂದಿಗೆ ಸೆಂಟರ್ ಸಮಿತಿ ಅಧ್ಯಕ್ಷ ಹಾಜಿ ಬಿ.ಎಂ ಇಸ್ಮಾಯಿಲ್ ಪರಮಾಂಡ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸೆಂಟರ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಯಿಲ್ ಸಾಗ್ ಸ್ವಾಗತಿಸಿದರು. ಕಿನ್ಯ ಕೇಂದ್ರ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ.ಸಿ ಇಸ್ಮಾಯಿಲ್ ಚಾಯರವಲಚ್ಚಿಲ್ ಸಭೆಯನ್ನು ಉದ್ಘಾಟಿಸಿದರು. ಎಸ್.ವೈ.ಎಸ್. ದ.ಕ ವೆಸ್ಟ್ ಅಧ್ಯಕ್ಷ ಅಶ್‌ಅರಿಯ್ಯ್ ಮುಹಮ್ಮದ್ ಅಲಿ ಸಖಾಫಿ, ದ.ಕ ಜಿಲ್ಲೆ ಆಯುಷ್ ಇಲಾಖೆಯ ಅಧಿಕಾರಿ ಡಾ. ಮುಹಮ್ಮದ್ ಇಕ್ಬಾಲ್ ಕಿನ್ಯ, ಸಾಮಾಜಿಕ ಕಾರ್ಯಕರ್ತ ನಾರಾಯಣ ಪೂಜಾರಿ, ರೊನಾಲ್ಡ್ ಡಿಸೋಜ ಸಂಕೇಶ, ಕಿನ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಫೈಝಿ ಪಡ್ಪು, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಪಾಲಡಿ, ಮಾಜಿ ಉಪಾಧ್ಯಕ್ಷ ಸಿರಾಜ್ ಕಿನ್ಯ, ಬೆಳರಿಂಗೆ ಮಹಮ್ಮಾಯಿ ಮಿತ್ರ ಮಂಡಲದ ಸಂಚಾಲಕ ರವಿ ಪೂಜಾರಿ, ಕಿನ್ಯ ಗ್ರಾಮ ಪಂಚಾಯತ್ ಸದಸ್ಯರಾದ ಫಾರೂಖ್ ಕಿನ್ಯ, ಇಸ್ಮಾಯಿಲ್ ಫಯಾಝ್ ಕಿನ್ಯ,ದುಬೈ ಸುನ್ನೀ ಸಂಘಟನೆಗಳ ನಾಯಕ ಇ.ಕೆ ಇಬ್ರಾಹೀಂ ಕುಂಞಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಕಿನ್ಯ ಕೇಂದ್ರ ಜುಮುಅ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ (ಕಾಯಿಂಞಿ) ಹಾಜಿ, ಕೋಶಾಧಿಕಾರಿ ಸಾದುಕುಂಞಿ (ಬಾವು) ಹಾಜಿ ಸಾಗ್,ಬೆಳರಿಂಗೆ ಖಿಳ್ರಿಯ್ಯಿ ಮಸ್ಜಿದ್ ಅಧ್ಯಕ್ಷ ಬಿ.ಎಂ ಇಬ್ರಾಹೀಂ ಕಿನ್ಯ, ಸೆಂಟರ್ ಸಮಿತಿ ಸಾಂತ್ವನ ಕಾರ್ಯದರ್ಶಿ ಎಂ.ಕೆ.ಎಂ ಇಸ್ಮಾಯಿಲ್ ಮೀಂಪ್ರಿ, ಸಾಮಾಜಿಕ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಸಾಮಣಿಗೆ, ಟೀಂ ಇಸಾಬ ಅಮೀರ್ ಅಬೂಬಕರ್ ಖುತುಬಿನಗರ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶೇಖರ ಮಾರ್ಲ, ಕಿನ್ಯ ಬೆಳರಿಂಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ದೀಖ್ ಕಲ್ಲಾಂಡ, ಕೇಂದ್ರ ಜುಮುಅ ಮಸ್ಜಿದ್ ಮುಅಝ್ಝಿನ್ ಇಕ್ಬಾಲ್ ಮುಸ್ಲಿಯಾರ್ ಮುಂತಾದವರು ಉಪಸ್ಥಿತರಿದ್ದರು.
ಸೆಂಟರ್ ಸಮಿತಿ ಉಪಾಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ ತಂಙಳ್ ಕಿನ್ಯ ಶುಭ ಹಾರೈಸಿದರು. ಕಿನ್ಯ ಸೆಂಟರ್ ಸಮಿತಿ ಉಸ್ತುವಾರಿ ಫಾರೂಖ್ ತಲಪಾಡಿ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಸೆಂಟರ್ ಸಮಿತಿ ಕೋಶಾಧಿಕಾರಿ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ ವಂದಿಸಿದರು