Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಲಿಂಗ ಸಮಾನತೆಯಲ್ಲಿ 146 ದೇಶಗಳ ಪೈಕಿ...

ಲಿಂಗ ಸಮಾನತೆಯಲ್ಲಿ 146 ದೇಶಗಳ ಪೈಕಿ ಭಾರತಕ್ಕೆ 135 ನೇ ಸ್ಥಾನ: ವರದಿ

ವಾರ್ತಾಭಾರತಿವಾರ್ತಾಭಾರತಿ14 July 2022 9:19 PM IST
share
ಲಿಂಗ ಸಮಾನತೆಯಲ್ಲಿ 146 ದೇಶಗಳ ಪೈಕಿ ಭಾರತಕ್ಕೆ 135 ನೇ ಸ್ಥಾನ: ವರದಿ

ಹೊಸದಿಲ್ಲಿ,ಜು.14: ವಿಶ್ವ ಆರ್ಥಿಕ ವೇದಿಕೆ (ಡಬ್ಲುಇಎಫ್)ಯು ಬುಧವಾರ ಜಿನಿವಾದಲ್ಲಿ ಬಿಡುಗಡೆಗೊಳಿಸಿದ ವಾರ್ಷಿಕ ಲಿಂಗ ಅಂತರ ವರದಿ 2022ರಲ್ಲಿ ಭಾರತವು ಲಿಂಗ ಸಮಾನತೆಯಲ್ಲಿ 146 ದೇಶಗಳ ಪೈಕಿ 135ನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ, ಕಾಂಗೋ, ಇರಾನ್ ಮತ್ತು ಚಾಡ್ ಸೇರಿದಂತೆ ಕೇವಲ 11 ದೇಶಗಳು ಮಾತ್ರ ಭಾರತಕ್ಕಿಂತ ಕೆಳಗಿನ ಸ್ಥಾನಗಳಲ್ಲಿವೆ.

ಐಸ್‌ಲ್ಯಾಂಡ್ ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಲಿಂಗ ಸಮಾನತೆಯನ್ನು ಹೊಂದಿರುವ ದೇಶವೆಂಬ ತನ್ನ ಹೆಗ್ಗಳಿಕೆಯನ್ನು ಕಾಯ್ದುಕೊಂಡಿದೆ. ಫಿನ್ಲಂಡ್,ನಾರ್ವೆ,ನ್ಯೂಜಿಲಂಡ್ ಮತ್ತು ಸ್ವೀಡನ್ ನಂತರದ ಸ್ಥಾನಗಳಲ್ಲಿವೆ. ಕಾರ್ಮಿಕ ವರ್ಗದಲ್ಲಿ ಲಿಂಗ ಅಂತರವು ಹೆಚ್ಚುವುದರೊಂದಿಗೆ ಜೀವನ ವೆಚ್ಚದ ಬಿಕ್ಕಟ್ಟು ಜಾಗತಿಕವಾಗಿ ಮಹಿಳೆಯರನ್ನು ಹೆಚ್ಚಾಗಿ ಬಾಧಿಸುವ ನಿರೀಕ್ಷೆಯಿದೆ. 2021ರಲ್ಲಿಯ 136 ವರ್ಷಗಳಿಗೆ ಹೋಲಿಸಿದರೆ ಲಿಂಗ ಅಂತರವನ್ನು ನಿವಾರಿಸಲು ಇನ್ನೂ 132 ವರ್ಷಗಳು ಬೇಕಾಗುತ್ತವೆ ಎಂದು ವರದಿಯು ತಿಳಿಸಿದೆ.

ಕೋವಿಡ್ ಸಾಂಕ್ರಾಮಿಕವು ಲಿಂಗ ಸಮಾನತೆಯನ್ನು ಒಂದು ತಲೆಮಾರಿನಷ್ಟು ಹಿಂದಕ್ಕೆ ಒಯ್ದಿದೆ ಮತ್ತು ದುರ್ಬಲ ಚೇತರಿಕೆಯು ಜಾಗತಿಕವಾಗಿ ಅದನ್ನು ಇನ್ನಷ್ಟು ಹದಗೆಡಿಸುತ್ತಿದೆ ಎಂದು ವರದಿಯು ಬೆಟ್ಟು ಮಾಡಿದೆ.
 
ಭಾರತ ಕುರಿತಂತೆ ವರದಿಯು,ಅದರ ಲಿಂಗ ಅಂತರ ಅಂಕವು ಕಳೆದ 16 ವರ್ಷಗಳಲ್ಲಿ ತನ್ನ ಏಳನೇ ಗರಿಷ್ಠ ಮಟ್ಟವನ್ನು ದಾಖಲಿಸಿದೆ,ಆದರೆ ವಿವಿಧ ಮಾನದಂಡಗಳಲ್ಲಿ ಅದು ಪಟ್ಟಿಯಲ್ಲಿ ತಳಮಟ್ಟದ ರಾಷ್ಟ್ರಗಳೊಂದಿಗೆ ಮುಂದುವರಿದಿದೆ ಎಂದು ವರದಿಯು ಹೇಳಿದೆ.
ಅಂದಾಜು 66.20 ಕೋಟಿ ಮಹಿಳಾ ಜನಸಂಖ್ಯೆಯೊಂದಿಗೆ ಭಾರತದ ಸಾಧನೆಯ ಮಟ್ಟವು ಪ್ರಾದೇಶಿಕ ಶ್ರೇಯಾಂಕಗಳನ್ನು ಅತಿಯಾಗಿ ಅವಲಂಬಿಸಿದೆ ಎಂದಿದೆ. ವರದಿಯು ಆರ್ಥಿಕ ಪಾಲ್ಗೊಳ್ಳುವಿಕೆ ಮತ್ತು ಅವಕಾಶ,ಶೈಕ್ಷಣಿಕ ಸಾಧನೆ,ಆರೋಗ್ಯ ಮತ್ತು ಬದುಕುಳಿಯುವಿಕೆ ಹಾಗೂ ರಾಜಕೀಯ ಸಬಲೀಕರಣ ಈ ನಾಲ್ಕು ಆಯಾಮಗಳಲ್ಲಿ ಲಿಂಗ ಸಮಾನತೆಯ ಅಧ್ಯಯನ ನಡೆಸಿದೆ.
 
2021ರಲ್ಲಿ ಚೇತರಿಕೆಯೊಂದಿಗೆ ಭಾರತವು ‘ಆರ್ಥಿಕ ಪಾಲ್ಗೊಳ್ಳುವಿಕೆ ಮತ್ತು ಅವಕಾಶ’ ಆಯಾಮಕ್ಕೆ ಸಂಬಂಧಿಸಿದಂತೆ ತನ್ನ ಸಾಧನೆಯಲ್ಲಿ ಹೆಚ್ಚು ಮಹತ್ವಪೂರ್ಣ ಮತ್ತು ಧನಾತ್ಮಕ ಬದಲಾವಣೆಯನ್ನು ದಾಖಲಿಸಿದೆ. ಆದರೆ ಕಾರ್ಮಿಕ ವರ್ಗದ ಪಾಲ್ಗೊಳ್ಳುವಿಕೆಯು ಪುರುಷರಲ್ಲಿ ಮೈನಸ್ 9.5 ಶೇಕಡಾ ಅಂಕಗಳಷ್ಟು ಮತ್ತು ಮಹಿಳೆಯರಲ್ಲಿ ಮೈನಸ್ 3 ಶೇಕಡಾ ಅಂಕಗಳಷ್ಟು ಕುಗ್ಗಿದೆ ಎಂದು ವರದಿಯು ಹೇಳಿದೆ.

ಮಹಿಳಾ ಶಾಸಕರು,ಹಿರಿಯ ಅಧಿಕಾರಿಗಳು ಮತ್ತು ವ್ಯವಸ್ಥಾಪಕರ ಪಾಲು ಶೇ.14.6ರಿಂದ ಶೇ.17.6ಕ್ಕೆ ಹಾಗೂ ವೃತ್ತಿಪರ ಮತ್ತು ತಾಂತ್ರಿಕ ಕಾರ್ಮಿಕರಾಗಿ ಮಹಿಳೆಯರ ಪಾಲು ಶೇ.29.2ರಿಂದ ಶೇ.32.9ಕ್ಕೆ ಏರಿದೆ. ಅಂದಾಜು ಆದಾಯ ಗಳಿಕೆಗೆ ಲಿಂಗ ಸಮಾನತೆಯ ಅಂಕದಲ್ಲಿ ಸುಧಾರಣೆಯಾಗಿದ್ದರೆ ಪುರುಷರು ಮತ್ತು ಮಹಿಳೆಯರಿಗೆ ಮೌಲ್ಯಗಳು ಕುಸಿದಿವೆ ಮತ್ತು ಕುಸಿತವು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿದೆ.

ಆದಾಗ್ಯೂ ರಾಜಕೀಯ ಸಬಲೀಕರಣ ಕ್ಷೇತ್ರದಲ್ಲಿ ಭಾರತವು ತುಲನಾತ್ಮಕವಾಗಿ ಮೇಲಿನ 48ನೇ ಸ್ಥಾನದಲ್ಲಿರುವ ಉಪಸೂಚ್ಯಂಕವು ಕಳೆದ 50 ವರ್ಷಗಳಿಂದ ಸರಕಾರಗಳ ಮುಖ್ಯಸ್ಥರಾಗಿ ಮಹಿಳೆಯರು ಸೇವೆ ಸಲ್ಲಿಸಿದ ವರ್ಷಗಳು ಕಡಿಮೆಯಾಗುತ್ತಿರುವುದರಿಂದ ಇಳಿಕೆಯನ್ನು ತೋರಿಸುತ್ತಿದೆ. ಆರೋಗ್ಯ ಮತ್ತು ಅಸ್ತಿತ್ವದ ಉಪಸೂಚ್ಯಂಕದಲ್ಲಿ ಭಾರತವು ಅತ್ಯಂತ ಕನಿಷ್ಠವಾದ 146ನೇ ಸ್ಥಾನದಲ್ಲಿದೆ ಮತ್ತು ಲಿಂಗ ಅಂತರವು ಶೇ.5ಕ್ಕೂ ಅಧಿಕವಿರುವ ಐದು ದೇಶಗಳ ಗುಂಪಿನಲ್ಲಿ ಕಾಣಿಸಿಕೊಂಡಿದೆ. 

ಖತರ್,ಪಾಕಿಸ್ತಾನ,ಅಝರ್ಬೈಜನ್ ಮತ್ತು ಚೀನಾ ಇತರ ನಾಲ್ಕು ದೇಶಗಳಾಗಿವೆ.
ಪ್ರಾಥಮಿಕ ಶಿಕ್ಷಣದ ದಾಖಲಾತಿಗಾಗಿ ಮತ್ತು ವಿವಿ ಶಿಕ್ಷಣ ದಾಖಲಾತಿಗಾಗಿ ಲಿಂಗ ಸಮಾನತೆಯಲ್ಲಿ ಭಾರತವು ಜಾಗತಿಕವಾಗಿ ಅಗ್ರಸ್ಥಾನದಲ್ಲಿದೆ. ದಕ್ಷಿಣ ಏಶ್ಯಾದಲ್ಲಿ ಒಟ್ಟಾರೆ ಅಂಕದಲ್ಲಿ ಭಾರತವು ಬಾಂಗ್ಲಾದೇಶ, ನೇಪಾಳ,ಶ್ರೀಲಂಕಾ,ಮಾಲ್ದೀವ್ಸ್ ಮತ್ತು ಭೂತಾನ್ ನಂತರ ಆರನೇ ಅತ್ಯುತ್ತಮ ಶ್ರೇಯಾಂಕವನ್ನು ಪಡೆದಿದೆ. ಸಮೀಕ್ಷೆಗೊಳಗಾದ 146 ದೇಶಗಳ ಪೈಕಿ ಕೇವಲ ಶೇ.20ರಷ್ಟು ದೇಶಗಳು ಕಳೆದ ವರ್ಷದಲ್ಲಿ ಲಿಂಗ ಅಂತರವನ್ನು ಕನಿಷ್ಠ ಶೇ.1ರಷ್ಟು ತಗ್ಗಿಸುವಲ್ಲಿ ಸಫಲಗೊಂಡಿವೆ ಎಂದು ವರದಿಯು ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X