ಫಾದರ್ ಮುಲ್ಲರ್ ಹೋಮಿಯೋಪತಿ ಮಹಾವಿದ್ಯಾಲಯದಲ್ಲಿ ಉಪನ್ಯಾಸ

ಮಂಗಳೂರು, ಜು.15: ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸ್ಥಾಪನಾ ದಿನ ಹಾಗೂ ಡಾ.ಎಂ.ಎಲ್.ಧಾವಲೆಯವರ 95ನೇ ಜನ್ಮ ದಿನಾಚರಣೆಯ ಸ್ಮರಣಾರ್ಥವಾಗಿ ಗುರುವಾರ ಉಪನ್ಯಾಸ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ನಿರ್ದೇಶಕರಾದ ವಂ. ರಿಚರ್ಡ್ ಅಲೋಸಿಯಸ್ ಕುವೆಲ್ಲೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಂಬೈನ ಡಾ.ಎಂ.ಎಲ್.ಧಾವಲೆ ಸ್ಮಾರಕ ಹೋಮಿಯೋಪಥಿ ಇನ್ಸ್ಟಿಟ್ಯೂಟ್‌ನ ಪ್ರಾಂಶುಪಾಲರು ಮತ್ತು ನಿರ್ದೇಶಕರಾದ ಡಾ. ಬಿಪಿನ್ ಜೈನ್ ಭಾಗವಹಿಸಿದ್ದರು.
ಗೌರವ ಅತಿಥಿಯಾಗಿ ಡಾ. ಎವ್. ಎಲ್. ಧಾವಲೆ ಸ್ಮಾರಕ ಹೋಮಿಯೋಪಥಿ ಇನ್ಸ್ಟಿಟ್ಯೂಟ್‌ನ ಸಂಶೋಧನೆ ಮತ್ತು ವೈದ್ಯಕೀಯ ಮಾಹಿತಿ ವಿಭಾಗದ ಎಚ್‌ಒಡಿ ಡಾ. ಪ್ರಶಾಂತ್ ತಾಂಬೋಲಿ ಉಪಸ್ಥಿತರಿದ್ದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಉಪಪ್ರಾಂಶುಪಾಲ ಡಾ.ವಿಲ್ಮಾ ಮೀರಾ ಡಿಸೋಜ, ಕಾರ್ಯಕ್ರಮದ ಸಂಯೋಜಕ ಡಾ.ಜೋನ್ ಪಾವ್ಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ‘ಪೊಟೆನ್ಶಿಯಾ -22’ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ಸಂಶೋಧನಾ ಪ್ರಬಂಧ ಮಂಡನೆ ಸ್ಪರ್ಧೆಯನ್ನು ಬುಧವಾರ ಆಯೋಜಿಸಲಾಗಿತ್ತು. ಪಶ್ಚಿಮ ಬಂಗಾಳ, ಬೆಳಗಾವಿ, ಬೆಂಗಳೂರು, ತಮಿಳುನಾಡು, ಧಾರವಾಡ ಮತ್ತು ಮೂಡುಬಿದಿರೆಯಿಂದ 24 ಪದವಿ ಮತ್ತು ಸ್ನಾತಕೋತ್ತರ ಹೋಮಿಯೋಪಥಿ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಬಾಗವಹಿಸಿದ್ದರು.
ಸಂಶೋಧನಾ ಪ್ರಬಂಧ ಮಂಡನೆ ವಿಜೇತರನ್ನು ವೇದಿಕೆಯಲ್ಲಿ ಅತಿಥಿಗಳು ಘೋಷಿಸಿ ಸನ್ಮಾನಿಸಿದರು. ಪಶ್ಚಿಮ ಬಂಗಾಳದ ಮಹೇಶ್ ಟ್ಟಾಚಾರ್ಯ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಡಾ. ಪ್ರೀತಮ್ ಗೋಸ್ವಾಮಿ ಪ್ರಥಮ, ಮೂಡುಬಿದಿರೆ ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ರಾಜ್ ಕಣ್ಣನ್ ದ್ವಿತೀಯ ಹಾಗೂ ಬೆಂಗಳೂರಿನ ಸರಕಾರಿ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಡಾ.ಶಿರೂರ್‌ಕರ್ ಮನಾಲಿ ರಾಮಚಂದ್ರ ತೃತೀಯ ಸ್ಥಾನ ಪಡೆದರು.
ಕಾರ್ಯಕ್ರಮ ಸಂಯೋಜಕರಾದ ಡಾ. ಜೋನ್ ಪಾವ್ಲ್ ಕಾರ್ಯಕ್ರಮದ ವರದಿಯನ್ನು ಮಂಡಿಸಿ ವಂದಿಸಿದರು.
ಈ ಸಂದರ್ದಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಶೋಧಕರಿಗಾಗಿ ಸ್ಥಾಪಿಸಲಾದ ಯುವ ಸಂಶೋಧಕ ಪ್ರಶಸ್ತಿಯನ್ನು ಮುತ್ತು ವಾಲಿಯಮ್ಮೈ ನಾಚಿಯಪ್ಪನ್ ಅವರಿಗೆ ನೀಡಲಾಯಿತು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಇ.ಎಸ್.ಜೆ. ಪ್ರಭು ಕಿರಣ್ ಸ್ವಾಗತಿಸಿದರು. ಆಡಳಿತಾಧಿಕಾರಿ ವಂ. ರೋಶನ್ ಕ್ರಾಸ್ತಾ ಸಂಶೋಧನಾ ಪ್ರಬಂದ ಮಂಡನೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಪ್ರಶಂಸಿಸಿದರು.
ಆಶಾ ಡಿಸೋಜ, ಎಸ್.ಎಂ. ಕೋಕಿಲಾ, ಡಾ. ಶ್ರೇಯಾಂಕ್ ಕೋಟ್ಯಾನ್, ಜೀನಾ ಜಾಯ್, ಅಂಕಿತಾ ಕಾರ್ನಿಕ್ ಮತ್ತು ಶ್ರೀಕನ್ಯಾ ಇವರು ಈ 2 ದಿನದ ಕಾರ್ಯಕ್ರಮನ್ನು ನಿರೂಪಿಸಿದರು.