ಬಂಟ್ವಾಳ ವಲಯ ಮಟ್ಟದ ಚೆಸ್ ಪಂದ್ಯಾಟ

ಬಂಟ್ವಾಳ: ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬಂಟ್ವಾಳ ಸಂಪನ್ಮೂಲ ಕೇಂದ್ರ ಹಾಗೂ ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಬಂಟ್ವಾಳ ವಲಯ ಮಟ್ಟದ ಚೆಸ್ ಪಂದ್ಯಾಟ ಗುರುವಾರ ನಡೆಯಿತು.
ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಗಂಗಾಧರ ರೈ ಕಮ್ಮಾಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲೆ ಸಂಚಾಲಕ ನರೇಂದ್ರನಾಥ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಿಷ್ಣು ನಾರಾಯಣ ಹೆಬ್ಬಾರ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದ.ಕ. ಉಪಾಧ್ಯಕ್ಷ ನವೀನ್ ಪಿ.ಎಸ್., ಬಂಟ್ವಾಳ ವಲಯದ ನೋಡೆಲ್ ಅಧಿಕಾರಿ, ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ್ ಅಜ್ಜಿಬೆಟ್ಟು, ಚೆಸ್ ಪಂದ್ಯಾಟದ ತೀರ್ಪುಗಾರರಾಗಿ ದರ್ಶಿತ ಹಾಗೂ ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ವಿಶ್ವನಾಥ್ ಸಪಲ್ಯ ಉಪಸ್ಥಿತರಿದ್ದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಿಷ್ಣು ನಾರಾಯಣ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಕೇಶವ ನಾಯ್ಕ್ ಸ್ವಾಗತಿಸಿದರು. ಶಿಕ್ಷಕಿ ಕೇಶವತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರೇಖಾ ವಂದಿಸಿದರು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆಯನ್ನು ಆಯೋಜಿಸಲಾಯಿತು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಿಷ್ಣು ನಾರಾಯಣ ಹೆಬ್ಬಾರ್ ಚೆಸ್ ಪಂದ್ಯಾಟ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿ ದಿವ್ಯಶ್ರೀ ಬಹುಮಾನ ವಿಜೇತರ ಹೆಸರನ್ನು ತಿಳಿಸಿದರು. ಶಿಕ್ಷಕಿ ಶ್ವೇತಾ ಡಿ. ವಂದಿಸಿದರು.