ಎನ್ ಐಆರ್ ಎಫ್ ಇಂಡಿಯಾ ರ‍್ಯಾಂಕಿಂಗ್; ಇಂಜಿನಿಯರಿಂಗ್ ವಿಭಾಗದಲ್ಲಿ ಎನ್‌ಐಟಿಕೆ ಸುರತ್ಕಲ್ ಗೆ 10ನೇ ಸ್ಥಾನ

ಸುರತ್ಕಲ್ : ಎನ್ಐಆರ್ ಎಫ್ ಇಂಡಿಯಾ ರ‍್ಯಾಂಕಿಂಗ್ 2022ರ ಇಂಜಿನಿಯರಿಂಗ್ ವಿಭಾಗದಲ್ಲಿ ಎನ್ ಐಟಿಕೆ ಸುರತ್ಕಲ್ 10ನೇ ಸ್ಥಾನ ಪಡೆದುಕೊಂಡಿದೆ. ಇದರೊಂದಿಗೆ ಸತತವಾಗಿ ಎರಡನೇ ಬಾರಿಗೆ ಭಾರತದ ಅಗ್ರ ಹತ್ತು ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಎನ್ಐಆರ್ ಎಫ್ ಇಂಡಿಯಾ ರ‍್ಯಾಂಕಿಂಗ್ 2022 ಅನ್ನು 11 ವಿಭಾಗಗಳಲ್ಲಿ ಇಂದು ಬಿಡುಗಡೆ ಮಾಡಿದರು.
ಇಂಜಿನಿಯರಿಂಗ್ ವಿಭಾಗದಲ್ಲಿ ಎನ್ಐಆರ್ ಎಫ್ 22ರಲ್ಲಿ ಎನ್ ಐಟಿಕೆ ಸುರತ್ಕಲ್ 10 ನೇ ಸ್ಥಾನವನ್ನು ಉಳಿಸಿಕೊಂಡರೆ, ಒಟ್ಟಾರೆ ವರ್ಗದಲ್ಲಿ 32 ನೇ ಸ್ಥಾನದಿಂದ 27ನೇ ಸ್ಥಾನಕ್ಕೆ ಜಿಗಿದಿದೆ. ಎಚ್ಇಐಗಳಲ್ಲಿ ಶ್ರೇಯಾಂಕಗಳನ್ನು ಬೋಧನೆ, ಕಲಿಕೆ ಮತ್ತು ಸಂಪನ್ಮೂಲಗಳು, ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸಗಳು, ಪದವಿ ಫಲಿತಾಂಶಗಳು, ಔಟ್‌ರೀಚ್ ಮತ್ತು ಒಳಗೊಳ್ಳುವಿಕೆ, ಪೀರ್ ಗ್ರಹಿಕೆ ಆಧಾರದ ಮೇಲೆ ಅಳವಡಿಸಿಕೊಳ್ಳಲಾಗುತ್ತಿದೆ.
ಸಾಧನೆಗೈದ ವಿದ್ಯಾರ್ಥಿಗಳು, ಬೆಂಬಲ ಮತ್ತು ಕೊಡುಗೆಗಳನ್ನು ನೀಡಿರುವ ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು ಮತ್ತು ಉದ್ಯಮದ ಪಾಲುದಾರರಿಗೆ ಎನ್ಐಟಿಕೆ ಸುರತ್ಕಲ್ ನಿರ್ದೇಶಕರಾದ ಪ್ರೊ. ಉದಯಕುಮಾರ್ ಆರ್. ಯರಗಟ್ಟಿ ಅವರು ಅಭಿನಂದನೆಸಲ್ಲಿಸಿದ್ದಾರೆ.