ಟಿಡಿಎಫ್ ಡೈಮಂಡ್ ಆ್ಯಂಡ್ ಗೋಲ್ಡ್ ನಿಂದ ಗ್ರಾಹಕರಿಗೆ ಬಂಪರ್ ಕೊಡುಗೆ

ಮಂಗಳೂರು: ವಜ್ರ ಹಾಗೂ ಚಿನ್ನಾಭರಣ ಕ್ಷೇತ್ರದಲ್ಲಿ ಪರಿಣಿತರಾದ ಗೌತಮ್ ಸಿಂಘ್ವಿ ಹಾಗೂ ಪ್ರಸನ್ನ ಶೆಟ್ಟಿ 1990ರಲ್ಲಿ ಸ್ಥಾಪಿಸಿರುವ ಟಿಡಿಎಫ್ ಡೈಮಂಡ್ ಆ್ಯಂಡ್ ಗೋಲ್ಡ್ 23ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ.
ಈ ಸುಸಂದರ್ಭ ಅದು ಗ್ರಾಹಕರಿಗೆ ಹಲವು ಕೊಡುಗೆಗಳನ್ನು ಘೋಷಿಸಿದ್ದು, ಚಿನ್ನಾಭರಣಗಳ ತಯಾರಿಕಾ ವೆಚ್ಚವನ್ನು ಶೇ.30 ಕಡಿತಗೊಳಿಸಿದೆ. ವಜ್ರಾಭರಣಗಳಿಗೆ ಯಾವುದೇ ತಯಾರಿಕಾ ಶುಲ್ಕ ಇರುವುದಿಲ್ಲ. ಈ ಕೊಡುಗೆ ಜು.17ರ ವರೆಗೆ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.
ವಾಶಿ, ಬಾಂದ್ರಾ, ಅಂಧೇರಿ ಹಾಗೂ ಮಂಗಳೂರಿನಲ್ಲಿ ತನ್ನ ಸುಸಜ್ಜಿತ ಶೋರೂಮ್‌ಗಳನ್ನು ಹೊಂದಿರುವ ಟಿಡಿಎಫ್, ರಿಟೇಲ್ ಚಿನ್ನ, ವಜ್ರ ಆಭರಣ ವ್ಯಾಪಾರ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ಅಲ್ಲದೆ, ವಿಶಿಷ್ಟ ವಿನ್ಯಾಸ ಹಾಗೂ ಪ್ರಮಾಣೀಕೃತ ವಜ್ರಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರಿಗೆ ನೀಡಲು ಸಂಸ್ಥೆಗೆ ಸಾಧ್ಯವಾಗಿದೆ. ಗ್ರಾಹಕರಿಗೆ ಸೂಕ್ತವಾದ ಬೆಲೆಯಲ್ಲಿ ಅವರು ಬಯಸಿದ ಡಿಸೈನ್‌ಗಳನ್ನು ಒದಗಿಸುವ ಮೂಲಕ ಉತ್ತಮ ಸೇವೆ ನೀಡುತ್ತಿದೆ. ಚಿನ್ನದ ತೂಕ, ತಯಾರಿಕಾ ವೆಚ್ಚ, ವಜ್ರದ ತೂಕ ಸೇರಿದಂತೆ ಉತ್ಪನ್ನದ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡಲಿದೆ.
ಮುಂಬೈ ಹಾಗೂ ಕರ್ನಾಟಕದ ವಿವಿಧೆಡೆ ರಿಟೇಲ್ ಮಳಿಗೆಗಳನ್ನು ಹೊಂದಿರುವ ಟಿಡಿಎಫ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಭಾರತದ ಹೊಸ ತಲೆಮಾರಿನ ಗ್ರಾಹಕರಿಗಾಗಿ ಆಭರಣ ಉತ್ಪಾದನೆಯಲ್ಲಿ ಅಧುನಿಕ ಆವಿಷ್ಕಾರಗಳನ್ನು ತರಲು ಶ್ರಮಿಸುತ್ತಿದೆ. ಮಂಗಳೂರಿನ ಟಿಡಿಎಫ್ ಮಳಿಗೆಗೆ ವಿರಾಜ್ ಹೆಗ್ಡೆ ಹಾಗೂ ಸುಧಾ ಶೆಟ್ಟಿ ಸಹ ಪಾಲುದಾರರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





