ಸಂತ ತೆರೇಸಾ ಶಾಲೆಯ ಸಂಸ್ಥಾಪಕರ ದಿನಾಚರಣೆ

ಮಂಗಳೂರು: ನಗರದ ಬೆಂದೂರಿನ ಸೈಂಟ್ ತೆರೇಸಾ ಶಾಲೆಯ ಸಂಸ್ಥಾಪಕರ ದಿನವನ್ನು ಶಾಲೆಯಲ್ಲಿ ಆಚರಿಸಲಾಯಿತು. ಸಿಸ್ಟರ್ಸ್ ಆಫ್ ಲಿಟಲ್ ಫ್ಲವರ್ಸ್ ಆಫ್ ಬೆಥನಿ ಸಂಸ್ಥೆಯ ಸಂಸ್ಥಾಪಕ ಫಾ.ಆರ್.ಎಫ್.ಸಿ. ಮಸ್ಕರೇನ್ಹಸ್‌ರ ಜೀವನ, ಸಾಮಾಜಿಕ ಸೇವೆಗಳು ಮತ್ತು ಬೆಥನಿ ಸಂಸ್ಥೆಯ ಹುಟ್ಟು ಹಾಗೂ ಬೆಳವಣಿಗೆಯ ಬಗ್ಗೆ ಪ್ರಸ್ತುತಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಶೈಲಾ, ಪ್ರಾಂಶುಪಾಲೆ ಲೂರ್ಡ್ಸ್, ಉಪಪ್ರಾಂಶುಪಾಲೆ ಕ್ಯಾರೆನ್, ಶಾಲಾ ಸಂಯೋಜಕ ವಿಂಜೋಯ್, ಗ್ರೇಸ್, ಶಾಂತಿ, ದಿವ್ಯಾ ಪಾಲ್ಗೊಂಡಿದ್ದರು.
Next Story





