PSI ನೇಮಕಾತಿ ಹಗರಣ: ಅಮೃತ್‍ಪೌಲ್‍ಗೆ 14 ದಿನಗಳ ನ್ಯಾಯಾಂಗ ಬಂಧನ

ಬೆಂಗಳೂರು, ಜು.15: ಪಿಎಸ್ಸೈ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಪೊಲೀಸ್ ಇಲಾಖೆಯ ಎಡಿಜಿಪಿ ಅಮೃತ್‍ಪೌಲ್ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನಗರದ ಒಂದನೆ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಶುಕ್ರವಾರ ಅಮೃತ್‍ಪಾಲ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಿದೆ. ಅಮೃತ್‍ಪಾಲ್‍ವೈದ್ಯಕೀಯ ಚಿಕಿತ್ಸೆಯಲ್ಲಿರುವುದರಿಂದ ಸುಳ್ಳು ಪತ್ತೆ ಪರೀಕ್ಷೆ ಸದ್ಯಕ್ಕೆ ಬೇಡ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್‍ಪಾಲ್ ಜು.4ರಂದು ಬಂಧಿಸಿದ್ದರು. ವಕೀಲ ಪ್ರಸನ್ನಕುಮಾರ್ ಸಿಐಡಿ ಪರ ವಾದ ಮಂಡಿಸಿದರು. ತನಿಖೆ ಮುಂದುವರೆಸಿರುವ ಸಿಐಡಿ ಈಗಾಗಲೇ 10 ಲಕ್ಷ ಒಳಗೊಂಡಿದ್ದ ಪೌಲ್ ಅವರ ನಾಲ್ಕು ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
Next Story





