ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ

ಮಂಗಳೂರು : ಅಖಿಲ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು ಮೇ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಪುತ್ತೂರಿನ ವಿಶ್ವಂಭರ ಶೆಟ್ಟಿ- ಉಷಾ ವಿ. ಶೆಟ್ಟಿ ದಂಪತಿಯ ಪುತ್ರ ಸಿ.ಎ ಅಶ್ಲೇಷ್ ಶೆಟ್ಟಿ ಉತ್ತೀರ್ಣರಾಗಿದ್ದಾರೆ.
ಕಾಸರಗೋಡಿನ ಚಿತ್ತರಿಕ್ಕಲ್‌ನ ಐಜಾಕ್ ಪಿ.ಜೆ.-ಮೇರಿ ಕುಟ್ಟಿ ಐಜಾಕ್‌ರ ಪುತ್ರ ಮಂಗಳೂರು ಕೇಂದ್ರದ ಶಿನೋಜ್ ಐಜಾಕ್ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ನಗರದ ಬೆಂದೂರವೆಲ್ ನಲ್ಲಿರುವ ಲೆಕ್ಕಪರಿಶೋಧಕ ಶ್ರೀನಿವಾಸ್ ಕಾಮತ್ ಬಳಿ ಇವರಿಬ್ಬರು ತರಬೇತಿ ಪಡೆದಿದ್ದರು.
ಕಾರ್ಕಳದ ಎಸ್.ಸತ್ಯೇಂದ್ರ ಕಾಮತ್-ಸಂಧ್ಯಾ ಎಸ್.ಕಾಮತ್ ದಂಪತಿಯ ಪುತ್ರ ಶ್ರವಣ್ ಎಸ್. ಕಾಮತ್ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಕಾರ್ಕಳದ ಆರ್. ರಮೇಶ್ ಪ್ರಭು- ಆರ್. ಪೂರ್ಣಿಮಾ ಪ್ರಭು ದಂಪತಿಯ ಪುತ್ರ ರಜತ್ ಆರ್. ಪ್ರಭು ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ್ದಾರೆ. ನಗರದ ಲೆಕ್ಕ ಪರಿಶೋಧಕ ಶಿವಾನಂದ ಪೈ ಬಿ. ಅವರ ಬಳಿ ಇವರಿಬ್ಬರು ತರಬೇತಿಯನ್ನು ಪಡೆದಿದ್ದರು.
ಮಂಗಳೂರಿನ ಪಡೀಲ್ ನಿವಾಸಿ ಟೆರೆನ್ಸ್ ಡಿಸೋಜ-ಮೇಬಲ್ ಡಿಸೋಜರ ಪುತ್ರಿ ಟಿಯಾನ ಡಿಸೋಜ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ್ದಾರೆ. ನಗರದ ಲೆಕ್ಕಪರಿಶೋಧಕ ಎಸ್.ಎಸ್. ನಾಯಕ್‌ರ ಬಳಿ ಇವರು ತರಬೇತಿ ಪಡೆದಿದ್ದರು.