ಮಂಗಳೂರು ಧರ್ಮಪ್ರಾಂತದ ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳಿಂದ ವೀರೇಂದ್ರ ಹೆಗ್ಗಡೆ ಭೇಟಿ

ಮಂಗಳೂರು: ರಾಜ್ಯಸಭಾ ಸದಸ್ಯರಾಗಿ ನಾಮ ನಿದೇರ್ಶನಗೊಂಡ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಮಂಗಳೂರು ಧರ್ಮಪ್ರಾಂತದ ಧರ್ಮಗುರುಗಳು, ಕೆಥೋಲಿಕ್ ಸಭಾದ ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶುಕ್ರವಾರ ವೀರೇಂದ್ರ ಹೆಗ್ಗಡೆಯವರ ನಿವಾಸದಲ್ಲಿ ಭೇಟಿಯಾಗಿ ಮಂಗಳೂರು ಧರ್ಮಪ್ರಾಂತದ ಪರವಾಗಿ ಆಭಿನಂದನೆ ಸಲ್ಲಿಸಿದರು.
ಧರ್ಮಪ್ರಾಂತದ ಶ್ರೇಷ್ಟಗುರು ಅತೀ ವಂದನೀಯ ಮೊನ್ಸಿಂಜೊರ್ ಮ್ಯಾಕ್ಸಿಮ್ ಎಲ್ ನೊರೊನ್ಹಾ, ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಅತೀ ವಂದನೀಯ ಡಾ.ಜೆ.ಬಿ. ಸಲ್ಡಾನ್ಹಾ ಮತ್ತು ರೋಯ್ ಕ್ಯಾಸ್ಟೆಲಿನೊ, ’ರಾಕ್ಣೊ’ ವಾರಪತ್ರಿಕೆಯ ನೀಯೋಜಿತ ಸಂಪಾದಕ ವಂದನೀಯ ರೂಪೇಶ್ ಮಾಡ್ತಾ, ಕೆನರಾ ಕಮ್ಯುನಿಕೇಶನ್ ಸೆಂಟರ್‌ನ ನಿರ್ದೇಶಕ ವಂದನೀಯ ಅನಿಲ್ ಫೆರ್ನಾಂಡಿಸ್, ಧರ್ಮಾಪ್ರಾಂತದ ಪಾಲನಾ ಪರಿಷತ್‌ನ ಕಾರ್ಯದರ್ಶಿ ಡಾ.ಜಾನ್ ಡಿಸಿಲ್ವಾ, ಅಂತರ್-ಧರ್ಮಿಯ ಸಂವಾದ ಆಯೋಗದ ಸದಸ್ಯ ರೋಮನ್ಸ್ ಲೋಬೋ ಉಪಸ್ಥಿತರಿದ್ದರು.
ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ)ದ ಅಧ್ಯಕ್ಷ ಸ್ಟ್ಯಾನಿ ಲೋಬೊ, ಉಪಾಧ್ಯಕ್ಷರಾದ ಮನೋಹರ್ ಕುಟಿನ್ಹೊ ಮತ್ತು ವಿನೋದ್ ಪಿಂಟೋ, ಖಜಾಂಚಿ ಅಲ್ಫೋನ್ಸ್ ಫೆರ್ನಾಂಡಿಸ್, ಜಂಟಿ ಖಜಾಂಚಿ ಫ್ರಾನ್ಸಿಸ್ ಸೆರಾವೊ ಮತ್ತು ನಿಕಟಪೂರ್ವ ಅಧ್ಯಕ್ಷ ಪೌಲ್ ರೊಲ್ಫಿ ಡಿಕೋಸ್ತ ಅಭಿನಂದಿಸಿದರು.
ಕೆಥೋಲಿಕ್ ಸಭಾ ಬೆಳ್ತಂಗಡಿ ಘಟಕದ ಅಧ್ಯಕ್ಷ ಎಡ್ವರ್ಡ್ ರೇಗೋ, ನಿಕಟಪೂರ್ವ ಅಧ್ಯಕ್ಷ ಜೆರೋಮ್ ಲೋಬೋ, ಉಪಾಧ್ಯಕ್ಷ ಅರುಣ್ ಫೆನಾರ್ಂಡಿಸ್ ಹಾಗೂ ಜಂಟಿ ಕಾರ್ಯದರ್ಶಿ ಗ್ರೆಗೊರಿ ಫೆನಾರ್ಂಡಿಸ್ ಸನ್ಮಾನಿಸಿದರು.
ಬೆಳ್ತಂಗಡಿ ವಲಯದ ಧರ್ಮಗುರು ಆತೀ ವಂದನೀಯ ಜೋಸೆಫ್ ಕಾರ್ಡೋಜ,ಪ್ರಾಂಶುಪಾಲ ವಂದನೀಯ ಕ್ಲಿಫರ್ಡ್ ಪಿಂಟೋ, ಪಾಲಿನ್ ರೇಗೋ, ಉಜಿರೆ ಚರ್ಚ್‌ನ ಧರ್ಮಗುರು ವಂದನೀಯ ಜೇಮ್ಸ್ ಡಿಸೋಜ,ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂದನೀಯ ವಿಜಯ್ ಲೋಬೊ, ಮಡಂತ್ಯಾರು ಚರ್ಚಿನ ಧರ್ಮಗುರು ವಂದನೀಯ ಬಾಸಿಲ್ ವಾಸ್, ಲಿಯೋ ರೋಡ್ರಿಗಸ್, ವಿವೇಕ್ ವಿನ್ಸೆಂಟ್ ಪಾಯ್ಸ್, ಜೆರಾಲ್ಡ್ ಮೊರಾಸ್ ಅಭಿನಂದಿಸಿದರು.
ಬೆಳ್ತಂಗಡಿ ಮತ್ತು ಬದ್ಯಾರ್‌ನ ಧರ್ಮ ಭಗಿನಿಯರಾದ ಸಿಸ್ಟರ್ ಪ್ಲೋಸ್ಸಿ, ಸಿಸ್ಟರ್ ರಮಿತಾ, ಸಿಸ್ಟರ್ ಜ್ಯೋತ್ಸ್ನಾ, ಸಿಸ್ಟರ್ ಸೇವ್ರಿನ್ ಮತ್ತು ಸಿಸ್ಟರ್ ವಲ್ಸಾ ಅಭಿನಂದಿಸಿದರು.
ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‌ಮೆಂಟ್ ಮಂಗಳೂರು ಇದರ ಸಂಚಾಲಕ ವಂದನೀಯ ಅಶ್ವಿನ್ ಕಾರ್ಡೋಜ, ಅಧ್ಯಕ್ಷ ಜೈಸನ್ ಲಾರೆನ್ಸ್ ಕ್ರಾಸ್ತಾ ಮತ್ತು ನವೀನ್ ಡಿಸೋಜ ಅಭಿನಂದಿಸಿದರು.







