ಮಾಜಿ ಕಾರ್ಪೊರೇಟರ್ ನಾಝಿಮರ ಪತಿ ಅಯೂಬ್ ಕೊಲೆ ಪ್ರಕರಣ: ಪುತ್ರನಿಂದಲೇ ಮೊದಲ ಹಲ್ಲೆ ಎಂದು ಆರೋಪ

ಬೆಂಗಳೂರು, ಜು.15: ಬಿಬಿಎಂಪಿ ಮಾಜಿ ಸದಸ್ಯೆ ನಾಝಿಮಾ ಖಾನ್ ಪತಿ ಅಯೂಬ್ ಖಾನ್ ಕೊಲೆ ಪ್ರಕರಣ ಸಂಬಂಧ ಆರೋಪಿಯೋರ್ವ ಹೇಳಿಕೆ ಬಿಡುಗಡೆ ಮಾಡಿದ್ದು, ಅಯೂಬ್ ಖಾನ್ ಪುತ್ರನೆ ಮೊದಲು ಹಲ್ಲೆಗೈದಿರುವುದಾಗಿ ಆಪಾದಿಸಿದ್ದಾನೆ.
ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಆರೋಪಿ ಮತೀನ್ ಖಾನ್ ಅಜ್ಞಾತ ಸ್ಥಳದಿಂದ ವಿಡಿಯೊ ಹರಿಬಿಟ್ಟಿದ್ದು, ಮೊದಲು ನನ್ನ ಮೇಲೆ ಅವರೇ ಹಲ್ಲೆ ಮಾಡಿದ್ದು, ಅದರಲ್ಲೂ ಅಯೂಬ್ ಹಾಗೂ ಆತನ ಪುತ್ರನೇ ಹಲ್ಲೆಗೆ ಮುಂದಾದರು. ಈ ವೇಳೆ ಮಾರಕಾಸ್ತ್ರಗಳನ್ನು ಬಳಕೆ ಮಾಡಿರುವುದಾಗಿ ಆರೋಪಿಸಿದ್ದಾನೆ.
ಸುಖಾಸುಮ್ಮನೆ ನನ್ನ ಮೇಲೆ ಪೊಲೀಸರಿಗೆ ದೂರು ಕೊಡುತ್ತಿದ್ದರು. ಹಲವು ಬಾರಿ ಪೊಲೀಸ್ ಠಾಣೆಗೆ ಕರೆಸಿ ಎಚ್ಚರಿಕೆ ಕೊಟ್ಟಿದ್ದಾರೆ. ಇತ್ತೀಚಿಗೆ ಘಟನೆ ನಡೆದಾಗ ನಾನು ನಮಾಝ್ ಮುಗಿಸಿ ಬೇಕರಿ ಬಳಿ ನಿಂತಿದ್ದಾಗ ಅಯೂಬ್ ಖಾನ್ ಹಾಗೂ ಅವರ ಮಗ ಬಂದು ಬೈದಿದ್ದಾರೆ. ಬಳಿಕ ಅವರ ಮಗ ನನಗೆ ಹಲ್ಲೆ ಮಾಡಿದ್ದಾನೆ ಎಂದು ಮತೀನ್ ಆರೋಪಿಸಿದ್ದಾನೆ.
Next Story





