ರಾಷ್ಟ್ರಪತಿ ಚುನಾವಣೆ : ಸಂಸದರಿಗೆ ಹಸಿರು, ಶಾಸಕರಿಗೆ ಗುಲಾಬಿ ಬಣ್ಣದ ಮತ ಪತ್ರ
ಹೊಸದಿಲ್ಲಿ, ಜು. 15: ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆಯ ಹಾಗೂ ರಾಜ್ಯ ಸಭೆಯ ಸದಸ್ಯರು ಎರಡು ವಿಭಿನ್ನ ಬಣ್ಣದ ಮತ ಪತ್ರಗಳನ್ನು ಪಡೆಯಲಿದ್ದಾರೆ.
ಸಂಸದರು ಹಸಿರು ಮತಪತ್ರ ಪಡೆದರೆ, ಶಾಸಕರು ಗುಲಾಬಿ ಬಣ್ಣದ ಮತಪತ್ರ ಪಡೆಯಲಿದ್ದಾರೆ.
ಶಾಸಕರ ಮತದ ಮೌಲ್ಯ ಅವರು ಪ್ರತಿನಿಧಿಸುತ್ತಿರುವ ರಾಜ್ಯದ ಜನಸಂಖ್ಯೆಯನ್ನು ಆಧಾರಿಸಿ ಇರಲಿದೆ. ಸಂಸದರ ಮತದ ಈ ಬಾರಿಯ ಮೌಲ್ಯ 700.
ಆದುದರಿಂದ ವಿಭಿನ್ನ ಬಣ್ಣದ ಮತ ಪತ್ರ ಮೌಲ್ಯದ ಆಧಾರದಲ್ಲಿ ಮತ ಲೆಕ್ಕ ಹಾಕಲು ಚುನಾವಣಾ ಅಧಿಕಾರಿಗಳಿಗೆ ನೆರವಾಗಲಿದೆ.
ಮತಪತ್ರಗಳಲ್ಲಿ ಎರಡು ಕಾಲಂಗಳನ್ನು ಮುದ್ರಿಸಲಾಗಿದೆ. ಮೊದಲ ಕಾಲಂನಲ್ಲಿ ಅಭ್ಯರ್ಥಿಯ ಹೆಸರು ಇರುತ್ತದೆ. ಎರಡನೇ ಕಾಲಂನಲ್ಲಿ ಮತದಾರರ ಆದ್ಯತೆಯ ಗುರುತು ಮಾಡಲು ಅವಕಾಶ ಇರುತ್ತದೆ.
Next Story





