‘ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ' ಅಧ್ಯಕ್ಷರನ್ನಾಗಿ ಡಾ.ಹರಿಲಾಲ್ ಪವಾರ್ ನೇಮಕ

ಡಾ.ಹರಿಲಾಲ್ ಪವಾರ್
ಬೆಂಗಳೂರು, ಜು. 15: ‘ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ'ಗೆ ಅಧ್ಯಕ್ಷರನ್ನಾಗಿ ಧಾರವಾಡದ ಡಾ.ಹರಿಲಾಲ್ ಖೀರು ಪವಾರ್ ಹಾಗೂ ಹತ್ತು ಮಂದಿ ಸದಸ್ಯರನ್ನು ನೇಮಕ ಮಾಡಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ.
ಬೆಂಗಳೂರಿನ ರಾಜಕುಮಾರ್ ಹನುಮಂತಪ್ಪ, ವಿಜಯನಗರ ಜಿಲ್ಲೆಯ ಡಾ.ಕಾಳಮ್ಮ, ಕಲಬುರಗಿಯ ಪ್ರೊ.ಕೃಷ್ಣಾನಾಯ್ಕ್, ಡಾ.ಎಂ.ಸೋಮಕ್ಕ, ಜಿ.ಗುರುನಾಥ, ಹಾವೇರಿ ಜಿಲ್ಲೆಯ ಡಾ.ಬಸವರಾಜು ಎಸ್.ಜಿ., ಬಾಗಲಕೋಟೆಯ ಶ್ರೀಕಾಂತ್ ಜಾಧವ, ವಿಜಯಪುರದ ಇಂಧುಮತಿ ಎಸ್.ಲಮಾಣಿ, ಡಾ.ವಿ.ಎಸ್. ಪಾಟೀಲ್ ಹಾಗೂ ಡಾ.ಪುಂಡಲೀಕ ಖುಬಾಸಿಂಗ್ ರಾಠೋಡ್ ಅವರನ್ನು ಸದಸ್ಯರನ್ನಾಗಿ ನೇಮಿಸಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಆರ್.ರಮೇಶ್ ಆದೇಶ ಮಾಡಿದ್ದಾರೆ.
Next Story





