ಎಂಜಿನ್‌ನಲ್ಲಿ ಕಂಪನ: ಇಂಡಿಗೊ ವಿಮಾನದ ಪಥ ಬದಲಾವಣೆ
ಹೊಸದಿಲ್ಲಿ, ಜು. 15: ಎಂಜಿನ್‌ನಲ್ಲಿ ಕಂಪನ ಕಂಡು ಬಂದ ಹಿನ್ನೆಲೆಯಲ್ಲಿ ದಿಲ್ಲಿಯಿಂದ ವಡೋದರಕ್ಕೆ ತೆರಳುತ್ತಿದ್ದ ಇಂಡಿಗೊ ವಿಮಾನದ ಪಥವನ್ನು ಜೈಪುರಕ್ಕೆ ಬದಲಾಯಿಸಲಾಯಿತು ಎಂದು ನಾಗರಿಕ ವಾಯುಯಾನದ ಪ್ರಧಾನ ನಿರ್ದೇನಾಲಯ (ಡಿಜಿಸಿಎ) ಶುಕ್ರವಾರ ತಿಳಿಸಿದೆ.
ಗುರುವಾರ ನಡೆದ ಘಟನೆ ಬಗ್ಗೆ ಡಿಜಿಸಿಎ ತನಿಖೆ ನಡೆಸುತ್ತಿದೆ ಎಂದು ಅದು ಹೇಳಿದೆ.
‘‘ಎಂಜಿನ್‌ನಲ್ಲಿ ಕಂಪನ ಗಮನಿಸಿದ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಪೈಲಟ್ ದಿಲ್ಲಿಯಿಂದ ವಡೋದರಾಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದ ಪಥವನ್ನು ಜೈಪುರಕ್ಕೆ ಬದಲಾಯಿಸಲು ನಿರ್ಧರಿಸಿದರು’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂಡಿಗೊ ವಿಮಾನ ಸಂಜೆ 8.30ಕ್ಕೆ ಜೈಪುರದಲ್ಲಿ ಇಳಿಯಿತು.
Next Story