ಈದ್ಗಾ ಮೈದಾನ ವಿವಾದ: ಕಂದಾಯ ಇಲಾಖೆಗೆ ಬಿಬಿಎಂಪಿ ಪತ್ರ

ಬೆಂಗಳೂರು, ಜು.15: ಚಾಮರಾಜಪೇಟೆ ಈದ್ಗಾ ಮೈದಾನ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರೆ.
2021ರ ರಾಜ್ಯ ಪತ್ರದಲ್ಲಿ ಈದ್ಗಾ ಮೈದಾನ ಬಿಬಿಎಂಪಿಯ ಸ್ವತ್ತು ಎಂದು ಉಲ್ಲೇಖ ಮಾಡಲಾಗಿದೆ. ಇದೇ ಪ್ರಕಾರ ಪ್ರಕರಣ ಕೈಗೆತ್ತಿಕೊಂಡು, ಯಾರೂ ಯಾವುದೇ ದಾಖಲೆಗಳನ್ನು ಸಲ್ಲಿಸದ ಕಾರಣ ಈ ಸ್ವತ್ತು ಪಾಲಿಕೆಯದ್ದೆ ಎಂದು ಮತ್ತೊಮ್ಮೆ ಅಧಿಸೂಚನೆ ಹೊರಡಿಸಲು ಪತ್ರ ಬರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
Next Story





