Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸ್ನೇಹಯಾತ್ರೆಯ ಮರ್ಮ!

ಸ್ನೇಹಯಾತ್ರೆಯ ಮರ್ಮ!

ಜಯಸುತ, ಶಿಕಾರಿಪುರಜಯಸುತ, ಶಿಕಾರಿಪುರ16 July 2022 11:43 AM IST
share
ಸ್ನೇಹಯಾತ್ರೆಯ ಮರ್ಮ!

ದೇಶದ ಆರ್ಥಿಕ ರಥದ ಗಾಲಿ ಪಂಕ್ಚರ್ ಆಗಿರುವ ಇಂತಹ ಸಂದರ್ಭದಲ್ಲಿ ಅರಬ್ ರಾಷ್ಟ್ರಗಳಿಂದ ಕಠಿಣ ನಿರ್ಧಾರಗಳು ಬಂದರೆ, ‘ಪಂಕ್ಚರ್‌ವಾಲಾ’ಗಳ ಶ್ರಮದ ಫಲ ನಿಂತು ಹೋದರೆ ರಥ ಚಲಿಸುವುದು ಕಷ್ಟ ಅನ್ನುವುದನ್ನು ಅರಿತವರು ಬಲ್ಲರು. ಹಾಗಾಗಿಯೇ ಸಾಮರಸ್ಯದಿಂದ ಮಾತ್ರ ದೇಶ ಉಳಿಯಬಹುದೆಂದು ಮನಗಂಡ ಪ್ರಧಾನಿಯವರು, ಯುಎಇ ದೊರೆಯ ಕೈಕುಲುಕಿ ಬಂದವರೇ ‘ಸ್ನೇಹಯಾತ್ರೆ’ಯ ಬಗ್ಗೆ ಮಾತಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜರ್ಮನಿಯಲ್ಲಿ ನಡೆದ ಜಿ7 ಸಮ್ಮೇಳನದಲ್ಲಿ ಭಾಗವಹಿಸಿ ಭಾರತಕ್ಕೆ ವಾಪಸಾಗುವಾಗ ದಾರಿ ಮಧ್ಯೆ ಯುಎಇಯಲ್ಲಿ ವಿಮಾನದಿಂದ ಇಳಿದ ಭಾರತದ ಪ್ರಧಾನಿಯವರು ಅಲ್ಲಿನ ದೊರೆಗಳ ಕೈಕುಲುಕಿ ಬಂದ ನಂತರ ಇಲ್ಲಿ ಹೀಗೆ ಶಾಕ್ ನೀಡಬಹುದೆಂದು ಯಾರೂ ಎಣಿಸಿರಲಾರರು. ಅಂತಹ ಅಚ್ಚರಿಯ ಘೋಷಣೆಯೊಂದನ್ನು ಪ್ರಧಾನಿಯವರು ಹೈದರಾಬಾದಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮೊಳಗಿಸಿದ್ದಾರೆ. ಅದೇನೆಂದರೆ, ದೇಶದಲ್ಲಿ ಬಿಗಡಾಯಿಸಿರುವ ಕೋಮು ಸಾಮರಸ್ಯವನ್ನು ಬೆಸೆಯಲು, ಮುಸ್ಲಿಮರ ಹೃದಯ ಗೆಲ್ಲಲು ಸ್ನೇಹಯಾತ್ರೆ ಕೈಗೊಳ್ಳಲಾಗುವುದೆಂದು!.

ಕೆಲವರಿಗೆ ಅಚ್ಚರಿ, ಕೆಲವರಿಗೆ ಅನುಮಾನ, ಕೆಲವರಿಗೆ ಗೊಂದಲ ಮೂಡಿಸಿರುವ ಈ ಹೇಳಿಕೆ ದ್ವೇಷಕ್ಕಾಗಿ ಪ್ರಾಣ ಕೊಡಲು ಸಿದ್ಧರಾಗಿರುವ ಶುದ್ಧ ದ್ವೇಷಪ್ರೇಮಿಗಳಿಗೆ ಶಾಕ್ ನೀಡಿರುವುದಂತೂ ನಿಜ. ದಿನ ಬೆಳಗಾದರೆ ಮುಸ್ಲಿಮರನ್ನು ಬೈಯುವ ಬೆಂಕಿ ಪೋಸ್ಟ್ ಹಾಕುವ ಐಟಿ ಸೆಲ್ ದ್ವೇಷಭಕ್ತರಿಗೆ ಈ ‘ಸ್ನೇಹ’ ಅನ್ನುವ ಮಾತು ಹೇಗೆ ಜೀರ್ಣವಾಗುತ್ತದೆಯೋ ಗೊತ್ತಿಲ್ಲ. ಇಂತಹ ದ್ವೇಷಭಕ್ತರನ್ನು ಪಕ್ಕಕ್ಕಿಡೋಣ. ಆದರೆ ಮೋದಿಯವರಿಗೆ ಇಷ್ಟು ವರ್ಷಗಳ ನಂತರ ಸ್ನೇಹಯಾತ್ರೆ ಮಾಡಬೇಕೆಂದು ಅನಿಸಿದ್ದಾದರೂ ಏಕೆ ಅಂತ ಪ್ರಶ್ನೆ ಮೂಡುವುದು ಸಹಜ.

 ದೇಶದಲ್ಲಿ ಏನೇನೆಲ್ಲ ನಡೆದಾಗಲೂ ಹೊರಗಿನಿಂದ ಬಂದ ಪ್ರತಿಕ್ರಿಯೆಗಳು ಕಡಿಮೆಯೇ. ಆದರೆ ನೂಪುರ್ ಶರ್ಮಾ ವಿವಾದ ಭುಗಿಲೆದ್ದ ಮೇಲೆ ಮುಸ್ಲಿಮ್ ರಾಷ್ಟ್ರಗಳು, ಅದರಲ್ಲೂ ಅರಬ್ ರಾಷ್ಟ್ರಗಳ ಪ್ರತಿಕ್ರಿಯೆ ದೊಡ್ಡ ಮಟ್ಟದಲ್ಲಿ ಬಂದಿದ್ದು ಎಲ್ಲರಿಗೂ ಗೊತ್ತು. ಅರಬ್ ದೇಶಗಳಲ್ಲಿ ಭಾರತದ ಉತ್ಪನ್ನಗಳ ಬಹಿಷ್ಕಾರ ಮತ್ತು ನಿಷೇಧಗಳ ಮಾತು ಕೇಳಿ ಬರತೊಡಗಿದವು. ಅಲ್ಲಿ ಕೆಲಸ ಮಾಡುವವರನ್ನು ವಜಾ ಮಾಡಿದ ವರದಿ ಬಂತು. ಈ ಬೆಳವಣಿಗೆ ದೇಶದ ಆರ್ಥಿಕ ವಹಿವಾಟಿಗೆ ದೊಡ್ಡ ಮಟ್ಟದ ಪೆಟ್ಟು ನೀಡುವ ಮುನ್ಸೂಚನೆ ಕಂಡ ಅಮಿತ್ ಶಾ ಮತ್ತು ಮೋದಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಕಾರಣ ನೂಪುರ್ ಶರ್ಮಾ ಮತ್ತು ಜಿಂದಾಲ್‌ರನ್ನು ಪಕ್ಷದಿಂದ ಹೊರ ಹಾಕಿದರು. ಭಾರತದ ರಾಯಭಾರ ಕಚೇರಿಗಳಿಂದ ಒಂದು ರೀತಿಯ ವಿಷಾದದ ಅರಿಕೆ ಮಾಡಿಕೊಳ್ಳಲಾಯಿತು. ಹೀಗೆ ಡ್ಯಾಮೇಜ್ ಕಂಟ್ರೋಲ್ ಮಾಡುವ ಮುಂದುವರಿದ ಭಾಗವೇ ಈ ಸ್ನೇಹಯಾತ್ರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಅರಬ್ ರಾಷ್ಟ್ರಗಳು ವ್ಯಾಪಾರ ಕೈ ಬಿಟ್ಟರೆ ಪರಿಣಾಮ ಏನಾಗಬಹುದೆಂದು ಸೂಕ್ಷ್ಮವಾಗಿ ಗಮನಿಸಿದರೆ ಇಂದು ಯಾವುದೇ ದೇಶಗಳ ಆರ್ಥಿಕತೆಯ ಇಂಜಿನ್ ಚಾಲನೆಯಲ್ಲಿರುವುದೇ ಪೆಟ್ರೋಲಿಯಂ ತೈಲದಿಂದ. ಭಾರತ ಶೇ. 80 ತೈಲವನ್ನು ಹೊರಗಿನಿಂದ ತರಿಸಿಕೊಳ್ಳುತ್ತದೆ. ಅದರಲ್ಲೂ ಶೇ. 60 ಕಚ್ಚಾತೈಲ ಅರಬ್ ಮುಸ್ಲಿಮ್ ದೇಶಗಳಿಂದ ಬರುತ್ತದೆ. ಇದರೊಂದಿಗೆ ಅಮೆರಿಕದ ನಂತರ ಯುಎಇ ಭಾರತದ ದೊಡ್ಡ ವ್ಯಾಪಾರ ವಹಿವಾಟು ನಡೆಸುವ ದೇಶವಾಗಿದೆ. ಹೀಗಿರುವಾಗ ಸಂಬಂಧ ಬಿಗಡಾಯಿಸಿಕೊಳ್ಳಲು ಸಾಧ್ಯವೇ!? ಹಾಗೆ ನೋಡಿದರೆ ಅರಬ್ ಮತ್ತು ಇಂಡಿಯಾ ಮಧ್ಯೆ ವ್ಯಾಪಾರ ವಹಿವಾಟು ನಿಂತು ಹೋದರೆ ಬರೀ ಭಾರತಕ್ಕೆ ಮಾತ್ರ ಪೆಟ್ಟು ಅಂತ ಭಾವಿಸಿದರೆ ಅದು ತಪ್ಪು. ಅಷ್ಟೇ ಹೊಡೆತ ಆ ರಾಷ್ಟ್ರಗಳಿಗೂ ಆಗುವ ಸಾಧ್ಯತೆಯಿದೆ. ಏಕೆಂದರೆ ನೀರು ಮತ್ತು ಆಹಾರ ಸಾಮಗ್ರಿಗಳನ್ನು ಅರಬ್ ದೇಶಗಳು ಹೊರಗಿನಿಂದ ಆಮದು ಮಾಡಿಕೊಳ್ಳುತ್ತವೆ. ಹಾಗೆ ಅವು ತರಿಸಿಕೊಳ್ಳುವ ದೇಶಗಳಲ್ಲಿ ಭಾರತ ಮುಖ್ಯವಾದದ್ದು. ಎರಡೂ ಕಡೆ ಆರ್ಥಿಕ ಹೊಡೆತ ಬೀಳುವುದು ನಿಜವಾದರೂ, ಯಾರು ಹೆಚ್ಚು ತಡೆದುಕೊಳ್ಳಬಹುದು ಎನ್ನುವುದರ ಮೇಲೆ ಅದು ನಿಂತಿದೆ.

ಈ ಟ್ರೇಡ್ ಹೊಡೆತ ಮ್ಯೂಚುವಲ್ (ಪರಸ್ಪರ) ಆಗಿರುವುದರಿಂದ ಅದಕ್ಕಿಂತಲೂ ಕಂಟ್ರೋಲ್ ಮಾಡಬೇಕಾಗಿದ್ದ ಡ್ಯಾಮೇಜು ಬೇರೆಯದೇ ಆಗಿದೆ ಅಂತ ತಜ್ಞರು ಹೇಳುತ್ತಿದ್ದಾರೆ. ಅದೇನೆಂದರೆ ‘ವಿದೇಶಿ ವಿನಿಮಯ’ ಅಥವಾ ‘ಫಾರಿನ್ ರೆಮಿಟೆನ್ಸ್’. ಫಾರಿನ್ ರೆಮಿಟೆನ್ಸಿನ ಕುಸಿತವೇ ಶ್ರೀಲಂಕಾವನ್ನು ಕಂಗಾಲು ಮಾಡಿದ್ದೆಂದು ತಿಳಿದರೆ ಭಾರತದಂತಹ ಅಭಿವೃದ್ಧಿಶೀಲ ದೇಶದ ಆರ್ಥಿಕತೆಯಲ್ಲಿ ಇದರ ಮಹತ್ವ ಏನು ಅನ್ನುವುದು ನಮಗೆ ಗೊತ್ತಾಗುತ್ತದೆ.

ನಮ್ಮಲ್ಲಿ ಉತ್ಪಾದಿಸಿರುವುದನ್ನು ರಫ್ತು ಮಾಡುವುದು, ಹೊರದೇಶದ ಜನ ನಮ್ಮ ದೇಶಕ್ಕೆ ಪ್ರವಾಸ ಬರುವುದು ಮತ್ತು ನಮ್ಮ ದೇಶದ ಜನ ಮುಂದುವರಿದ ದೇಶಗಳಲ್ಲಿ ದುಡಿಯುವುದು... ಹೀಗೆ ಮೂರ್ನಾಲ್ಕು ರೀತಿಯಲ್ಲಿ ವಿದೇಶಿ ಹಣ ಹರಿದು ಬರುತ್ತದೆ. ಭಾರತ ರಫ್ತು ಮಾಡುವಷ್ಟೇ ಅಥವಾ ಅದಕ್ಕಿಂತ ಹೆಚ್ಚೇ ಆಮದು ಮಾಡಿಕೊಳ್ಳುವುದರಿಂದ ಟ್ರೇಡ್‌ನಲ್ಲಿ ಅಷ್ಟೇನೂ ರೆಮಿಟೆನ್ಸ್ ಸಿಗುವುದಿಲ್ಲ. ಇನ್ನು ಕೋವಿಡ್ ನಂತರ ವಿದೇಶಿ ಪ್ರವಾಸಿಗರಿಂದ ನಿರೀಕ್ಷೆ ಮಾಡುವುದು ಕಡಿಮೆಯಾಗಿದೆ. ಹೀಗಿರುವಾಗ ನಮ್ಮ ರೆಮಿಟೆನ್ಸಿನ ಬಹುಮುಖ್ಯ ಆಧಾರ ವಿದೇಶಗಳಲ್ಲಿ ಕೆಲಸ ಮಾಡುವ ಭಾರತೀಯರು.

ಪ್ರಪಂಚದಲ್ಲಿಯೇ ಅತಿ ಹೆಚ್ಚು ರೆಮಿಟೆನ್ಸ್ ಗಳಿಸುವ ದೇಶ ಭಾರತ. ಸುಮಾರು 87 ಬಿಲಿಯನ್ ಡಾಲರ್ ಗಳಿಸುವ ಮುಖಾಂತರ ಒಂದನೇ ಸ್ಥಾನದಲ್ಲಿ ನಮ್ಮ ದೇಶವಿದ್ದರೆ, ಎರಡನೇ ಸ್ಥಾನದಲ್ಲಿ 53 ಬಿಲಿಯನ್ ಡಾಲರ್ ಗಳಿಸುವ ಚೀನಾವಿದೆ. 87 ಬಿಲಿಯನ್ ಡಾಲರ್ ಎಂದರೆ ಸುಮಾರು ಆರೇಳು ಲಕ್ಷ ಕೋಟಿ ರೂಪಾಯಿ ಆಗುತ್ತದೆ. ಭಾರತದ ಒಟ್ಟು ಆರ್ಥಿಕ ವಹಿವಾಟು ಅಂದಾಜು ರೂ. 31 ಲಕ್ಷ ಕೋಟಿ ಆಗಿದ್ದು ಅದರಲ್ಲಿ 7 ಲಕ್ಷ ಕೋಟಿ ಈ ಫಾರಿನ್ ರೆಮಿಟೆನ್ಸಿನಿಂದ ಬರುತ್ತಿದೆ. ಅಂದರೆ ಭಾರತದ ಆರ್ಥಿಕತೆಯ ಕಾಲು ಭಾಗದ ಕೊಡುಗೆ ಎನ್ನಾರೈ ಮತ್ತು ವಿದೇಶಗಳಲ್ಲಿ ಕೆಲಸ ಮಾಡುವವರ ಕೊಡುಗೆಯಾಗಿದೆ. ಹಲವಾರು ದೇಶಗಳಲ್ಲಿ ಭಾರತೀಯರು ನೆಲೆಸಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ. ಸುಮಾರು 91 ಲಕ್ಷ ಜನ ಹೊರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆಂದು ಅಂದಾಜಿಸಲಾಗಿದ್ದು, ಅದರಲ್ಲಿ 70 ರಿಂದ 80 ಲಕ್ಷ ಜನ ಮುಸ್ಲಿಮರಾಗಿದ್ದಾರೆ ಎಂದು ಹೇಳಲಾಗಿದೆ. ಅದರಲ್ಲೂ ಅರಬ್ ರಾಷ್ಟ್ರಗಳಲ್ಲಿ ದುಡಿಯುವವರ ಸಂಖ್ಯೆಯೇ ಅಧಿಕವಾಗಿದ್ದು, ದೇಶ ಗಳಿಸುವ ಒಟ್ಟು ರೆಮಿಟೆನ್ಸಿನಲ್ಲಿ ಶೇ. 65 ದುಡ್ಡು ಅರಬ್ ರಾಷ್ಟ್ರಗಳಿಂದ ಬರುತ್ತದೆ ಎನ್ನಲಾಗಿದೆ. ಅಂದರೆ ಅರಬ್‌ನಿಂದ ಸುಮಾರು ರೂ. 5 ಲಕ್ಷ ಕೋಟಿ ಭಾರತ ಸೇರುತ್ತಿದ್ದು ಅದರಲ್ಲಿ ಶೇ. 80ಕ್ಕಿಂತ ಹೆಚ್ಚು ಪಾಲು ಮುಸ್ಲಿಮರ ದುಡಿಮೆಯಾಗಿದೆ. ಅಲ್ಲಿಗೆ ದೇಶದ ಆರ್ಥಿಕತೆಯಲ್ಲಿ ಅರಬ್ ದೇಶಗಳಲ್ಲಿ ದುಡಿಯುವ ಮುಸ್ಲಿಮರ ಪಾತ್ರ ಎಷ್ಟೆಂದು ನಾವು ಅಂದಾಜಿಸಬಹುದು. ಇದುವರೆಗೆ ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮಗಳ ಮುಖಾಂತರ ದೇಶದ ಮುಸ್ಲಿಮರೆಂದರೆ ದಂಗೆಕೋರರು, ಜಿಹಾದಿಗಳು, ದೇಶದ್ರೋಹಿಗಳು ಎಂದು ಬಿಂಬಿಸುತ್ತಾ ಬರಲಾಗಿದೆ. ಜೊತೆಗೆ ಇವರು ಪಂಕ್ಚರ್ ಹಾಕುವವರು, ಬಡವರು, ನಮ್ಮ ತೆರಿಗೆ ಹಣದಿಂದ ತಿನ್ನುವವರು ಅಂತೆಲ್ಲಾ ಹಂಗಿಸುತ್ತಾ ಒಟ್ಟಾರೆ ದೇಶಕ್ಕೆ ‘ಹೊರೆ’ ಎಂದು ಬಿಂಬಿಸುವುದು ಬಿಜೆಪಿಯ ಐಟಿ ಸೆಲ್‌ನಿಂದ ಮುಂದುವರಿದಿದೆ.

ಧರ್ಮದ ಮಾತು ಹಾಗಿರಲಿ, ಒಬ್ಬ ಭಿಕ್ಷುಕನೂ ತಾನು ಭಿಕ್ಷೆ ಬೇಡಿ ತಂದ ದುಡ್ಡಿನಲ್ಲಿ ಒಂದು ಬಿಸ್ಕೆಟ್ ಪ್ಯಾಕ್ ಕೊಂಡು ತಿಂದರೆ ಆ ಮೂಲಕ ಸರಕಾರಕ್ಕೆ ಜಿಎಸ್‌ಟಿ ಕಟ್ಟುತ್ತಾನೆ. ಇದನ್ನು ಅರಿತ ಯಾರೂ ಮತ್ತೊಬ್ಬರನ್ನು ಹೊರೆ ಎಂದು ಕರೆಯಲಾರರು. ಆದರೆ ತೆಗಳಲೇಬೇಕು, ಅಪಪ್ರಚಾರ ಮಾಡಬೇಕೆಂದು ನಿರ್ಧಾರ ಮಾಡಿದವರಿಗೆ ಯಾವ ಲಾಜಿಕ್ಕೂ ಇರಲಾರದು. ಆದರೆ ಈ ಹೊರೆಯಾದವರೇ ಹೇಗೆ ಹೊರಗೆ ದುಡಿದು ತಂದು ದೇಶದ ಆರ್ಥಿಕತೆಯ ಹೊಣೆ ಹೊತ್ತಿದ್ದಾರೆ ಎಂಬುದನ್ನು ಮೇಲ್ಕಂಡ ಅಂಕಿಅಂಶಗಳು ತೋರಿಸುತ್ತಿವೆ. ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಭಾಷಣಗಳಲ್ಲಿ ಯಾರೆಷ್ಟು ಕೊರೆದರೂ ನೋಟ್ ಬ್ಯಾನ್ ನಂತರ ಭಾರತದ ಆರ್ಥಿಕತೆ ಕುಂಟುತ್ತಾ ಸಾಗಿರುವುದು, ಜಿಎಸ್‌ಟಿ ನಂತರ ತಡಬಡಾಯಿಸಿರುವುದು, ಕೋವಿಡ್ ನಂತರ ಮಗ್ಗಲು ಮುರಿದಿರುವುದನ್ನು ಮುಚ್ಚಿಡಲಾಗದು. ಹಲವು ಕಂಪೆನಿಗಳು ದೇಶಬಿಟ್ಟು ಹೋಗಿದ್ದು, ಭಾರತದಲ್ಲಿ ಹೂಡಬೇಕಾದ ಬಂಡವಾಳ ಅನ್ಯ ದೇಶಗಳ ಪಾಲಾಗಿದ್ದು ಅದಕ್ಕೆ ಸಾಕ್ಷಿಯಾಗಿದೆ. ದೇಶದ ಆರ್ಥಿಕ ರಥದ ಗಾಲಿ ಪಂಕ್ಚರ್ ಆಗಿರುವ ಇಂತಹ ಸಂದರ್ಭದಲ್ಲಿ ಅರಬ್ ರಾಷ್ಟ್ರಗಳಿಂದ ಕಠಿಣ ನಿರ್ಧಾರಗಳು ಬಂದರೆ, ‘ಪಂಕ್ಚರ್‌ವಾಲಾ’ಗಳ ಶ್ರಮದ ಫಲ ನಿಂತು ಹೋದರೆ ರಥ ಚಲಿಸುವುದು ಕಷ್ಟ ಅನ್ನುವುದನ್ನು ಅರಿತವರು ಬಲ್ಲರು. ಹಾಗಾಗಿಯೇ ಸಾಮರಸ್ಯದಿಂದ ಮಾತ್ರ ದೇಶ ಉಳಿಯಬಹುದೆಂದು ಮನಗಂಡ ಪ್ರಧಾನಿಯವರು, ಯುಎಇ ದೊರೆಯ ಕೈಕುಲುಕಿ ಬಂದವರೇ ‘ಸ್ನೇಹಯಾತ್ರೆ’ಯ ಬಗ್ಗೆ ಮಾತಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸ್ನೇಹ, ಸೌಹಾರ್ದಕ್ಕೆ ಯಾರು ಕರೆ ಕೊಟ್ಟರೂ ಸ್ವಾಗತಾರ್ಹ. ಸ್ನೇಹಯಾತ್ರೆ ಒಳ್ಳೆಯದೇ. ಆದರೆ ಸತ್ಯಶೋಧನೆ ಮಾಡುವವರನ್ನು ಜೈಲಿನಲ್ಲಿಟ್ಟು, ಐಟಿ ಸೆಲ್ ಮೂಲಕ ಸದಾ ವಿಷ ಉಗುಳಿಸಿ, ಬುಲ್ಡೋಜರ್ ನ್ಯಾಯದ ಮೂಲಕ ಸ್ನೇಹ ಬೆಸೆಯಲಾಗುತ್ತದೆಯೆ..!? ದೇಶದ ಆರ್ಥಿಕ ಸದೃಢತೆಯ ದೃಷ್ಟಿಯಿಂದಲಾದರೂ ಮನ ಪರಿವರ್ತನೆಯಾದರೆ ಸ್ವಾಗತ. ಪಂಕ್ಚರ್ ಆಗಿರುವ ದೇಶದ ಆರ್ಥಿಕ ಮೋಟಾರು ಗಾಡಿಯ ಟೈರ್ ಅನ್ನು ಸರಿ ಮಾಡಲು ‘ಪಂಕ್ಚರ್ ವಾಲಾ’ಗಳ ಅವಶ್ಯಕತೆ ಇದೆಯೇ ಹೊರತು ದ್ವೇಷ ಹರಡಿ ಮತ್ತಷ್ಟು ಪಂಕ್ಚರ್ ಮಾಡುವವರಲ್ಲ.

ಮಾಹಿತಿ: ವಿಶ್ವಬ್ಯಾಂಕ್

share
ಜಯಸುತ, ಶಿಕಾರಿಪುರ
ಜಯಸುತ, ಶಿಕಾರಿಪುರ
Next Story
X