ಸಿಂಗಾಪುರ ಓಪನ್: ಸಿಂಧು ಫೈನಲ್ ಗೆ ಲಗ್ಗೆ

Photo:PTI
ಕೌಲಾಲಂಪುರ: ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ ಗೆ ಪ್ರವೇಶಿಸಿದ್ದಾರೆ.
ಶನಿವಾರ 32 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ನ ಸೆಮಿ ಫೈನಲ್ ಹಣಾಹಣಿಯಲ್ಲಿ ಡಬಲ್ ಒಲಿಂಪಿಯನ್ ಸಿಂಧು ಜಪಾನ್ ಆಟಗಾರ್ತಿ ಸಯೆನಾ ಕವಾಕಮಿ ಅವರನ್ನು 21-15, 21-7 ಗೇಮ್ ಗಳ ಅಂತರದಿಂದ ಮಣಿಸಿದರು.
ಸಿಂಧು ಈ ವರ್ಷ ಸಯ್ಯದ್ ಮೋದಿ ಇಂಟರ್ ನ್ಯಾಶನಲ್ ಹಾಗೂ ಸ್ವಿಸ್ ಓಪನ್ ಸಹಿತ ಎರಡು ಸೂಪರ್ 300 ಪ್ರಶಸ್ತಿಗಳನ್ನು ಜಯಿಸಿದ್ದಾರೆ.
ಸಿಂಧು 2022ರ ಋತುವಿನಲ್ಲಿ ತನ್ನ ಚೊಚ್ಚಲ ಸೂಪರ್ 500 ಪ್ರಶಸ್ತಿಯನ್ನು ಗೆಲ್ಲಲು ಇನ್ನು ಒಂದೇ ಹೆಜ್ಜೆ ಹಿಂದಿದ್ದಾರೆ.
ಸಿಂಧು ಈ ಪಂದ್ಯಕ್ಕಿಂತ ಮೊದಲು ವಿಶ್ವದ ನಂ.38ನೇ ಆಟಗಾರ್ತಿ ಕವಾಕಮಿ ವಿರುದ್ಧ ಆಡಿದ್ದ ಎರಡೂ ಪಂದ್ಯಗಳನ್ನು ಜಯಿಸಿದ್ದರು. 2018ರ ಚೀನಾ ಓಪನ್ ನಲ್ಲಿ ಕವಾಕಮಿ ಅವರನ್ನು ಕೊನೆಯ ಬಾರಿ ಸೋಲಿಸಿದ್ದರು.
Next Story