ಎಸ್.ಡಿ.ಪಿ.ಐ. ತುಂಬೆ ತಂಡದಿಂದ ರಾ.ಹೆ.ಗೆ ಬಿದ್ದಿದ್ದ ಮರಗಳ ತೆರವು

ಬಂಟ್ವಾಳ, ಜು.16: ನಿರಂತರ ಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ದಿನಗಳಿಂದ ಬಿದ್ದಿದ್ದ ಮರಗಳನ್ನು ಎಸ್.ಡಿ.ಪಿ.ಐ. ತುಂಬೆ ಗ್ರಾಮ ಸಮಿತಿ ರೆಸ್ಕ್ಯೂ ತಂಡದ ವತಿಯಿಂದ ಶ್ರಮದಾನದ ಮೂಲಕ ಶನಿವಾರ ತೆರವು ಮಾಡಲಾಯಿತು.
ತುಂಬೆ ಸಮೀಪದ ಕಡೆಗೋಳಿ, ಕೆಳಗಿನ ತುಂಬೆ, ರಾಮಲ್ ಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿದ್ದ ಮರವನ್ನು ಕಡಿದು ತೆರವು ಮಾಡಲಾಯಿತು. ಅಲ್ಲದೆ ಬಂಟರ ಭವನದ ಎದುರು ಒಣಗಿ ಹೆದ್ದಾರಿಗೆ ಬೀಳುವ ಅಪಾಯದಲ್ಲಿದ್ದ ಮರವನ್ನು ತೆರವು ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಅಹ್ಮದ್, ರೆಸ್ಕ್ಯೂ ತಂಡದ ಪ್ರಮುಖರಾದ ಇಸ್ಮಾಯೀಲ್ ಕಾಲನಿ, ಅಕ್ಬರ್ ವಳವೂರ್, ಮುಸ್ತಾಕ್, ಶಂಶುದ್ದೀನ್, ಸಮೀರ್ ಮೊದಲಾದವರು ಉಪಸ್ಥಿತರಿದ್ದರು.