“ಆಜಾದಿ ಕಾ ಅಮೃತ್ ಮಹೋತ್ಸವ” ಪಿ.ಎಂ. ಸ್ವ-ನಿಧಿ
ಕಾಪು : ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಬೀದಿ ವ್ಯಾಪಾರಿಗಳಿಗೆ, ಸಣ್ಣ ವ್ಯಾಪಾರಿಗಳಿಗೆ, ಮತ್ತುಇತರ ಸಣ್ಣ ಉದ್ಯಮಕ್ಕೆ ಸಾಲ ಯೋಜನೆಯಡಿ ವ್ಯಾಪಾರ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಆತ್ಮನಿರ್ಭರ್ ನಿಧಿಯಡಿ ಕಿರು ಸಾಲ ಸೌಲಭ್ಯ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು ಇದರ ಪ್ರಯೋಜನವನ್ನು ಪಡೆಯುವಂತೆ ಕೋರಲಾಗಿದೆ.
ಕಾಪು ಪ್ರದೇಶದಲ್ಲಿರುವ ಬೀದಿ ವ್ಯಾಪಾರಿಗಳು ಸಣ್ಣ ವ್ಯಾಪಾರಿಗಳು ಮತ್ತು ವ್ಯಾಪಾರ ಮಾಡಲು ಆಸಕ್ತಿ ಇರುವ ಫಲಾನುಭವಿಗಳು ಈ ಯೋಜನೆಯಡಿ ಪ್ರಥಮವಾಗಿ ರೂ. 10,000/- ಎರಡನೆ ಹಂತದಲ್ಲಿ ರೂ.20,000/- ಮತ್ತು ಮೂರನೆ ಹಂತದಲ್ಲಿ ರೂ.50,000/- ದವರೆಗೆ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ, ಈ ಸಾಲವನ್ನು ವಾಣಿಜ್ಯ ಬ್ಯಾಂಕುಗಳ ಮೂಲಕ ಒದಗಿಸಲಾಗುವುದು.
ಯೋಜನೆಯ ಸದುಪಯೋಗ ಪಡೆಯಲು 1.ಆಧಾರ್ ಕಾರ್ಡ್ 2. ಮತದಾರರ ಗುರುತಿನ ಚೀಟಿ/ಪಾನ್ ಕಾಡ್, 3. ಪಡಿತರ ಚೀಟಿಯ ಪ್ರತಿ, ಮತ್ತು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿಯೊಂದಿಗೆ ಒಂದು ವಾರದ ಒಳಗಾಗಿ ಕಾಪು ಪುರಸಭೆಯನ್ನು ಸಂಪರ್ಕಿಸಲು ಕೋರಲಾಗಿದೆ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9844666814, 9844638641, 7019119589 ಯನ್ನು ಸಂಪರ್ಕಿಸಲು ತಿಳಿಸಿದೆ.