ಹಜ್ ನಿಂದ ಮರಳಿದವರನ್ನು ಆರತಿ ಎತ್ತಿ ಸ್ವಾಗತಿಸಿದ ಕಾಶ್ಮೀರಿ ಹಿಂದೂಗಳು: ವೀಡಿಯೋ ವೈರಲ್
Photo: Twitter
ಹೊಸದಿಲ್ಲಿ: ಸೌದಿ ಅರೇಬಿಯಾದ ಮಕ್ಕಾಗೆ ವಾರ್ಷಿಕ ಹಜ್ನಿಂದ ಹಿಂದಿರುಗಿದ ಯಾತ್ರಾರ್ಥಿಗಳನ್ನು ಸ್ಥಳೀಯ ಕಾಶ್ಮೀರಿ ಹಿಂದೂಗಳು ಆರತಿ ಎತ್ತುವ ಮೂಲಕ, ಇಸ್ಲಾಮಿಕ್ ಹಾಡುಗಳನ್ನು ಹಾಡುವ, ಹಸ್ತಲಾಘವ ಮಾಡುವುದರೊಂದಿಗೆ ಸ್ವಾಗತಿಸಿದರು. ಈ ಸಂಬಂಧ ವೀಡಿಯೋವೊಂದು ಸಾಮಾಜಿಕ ತಾಣದಾದ್ಯಂತ ಹರಿದಾಡುತ್ತಿದೆ.
ಶ್ರೀನಗರ ವಿಮಾನ ನಿಲ್ದಾಣದ ಸಣ್ಣ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡ ಉತ್ತರ ಪ್ರದೇಶದ ಶಾಸಕ ಅಬ್ಬಾಸ್ ಬಿನ್ ಮುಖ್ತಾರ್ ಅನ್ಸಾರಿ, ಕಾಶ್ಮೀರಿ ಪಂಡಿತರು ವಿಮಾನ ನಿಲ್ದಾಣದ ಹೊರಗೆ ಸಾಲಿನಲ್ಲಿ ನಿಂತ ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಶ್ಲಾಘಿಸುವ 'ನಾತ್' ಹಾಡುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ಲಗೇಜ್ಗಳೊಂದಿಗೆ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಜನರನ್ನು ಸ್ವಾಗತಿಸುವಾಗ ನೆರೆದಿರುವ ಗುಂಪು ಸಂತೋಷದಿಂದ ಹಾಡುತ್ತಿರುವುದನ್ನು ವೀಡಿಯೊ ಕ್ಲಿಪ್ ತೋರಿಸುತ್ತದೆ. ಸ್ವತಂತ್ರವಾಗಿ ವೀಡಿಯೊದ ದೃಢೀಕರಣವನ್ನು ಪರಿಶೀಲಿಸಿಲ್ಲ ಎಂದು NDTV ವರದಿ ತಿಳಿಸಿದೆ.
"ಹಜ್ ಮುಗಿಸಿ ಹಿಂದಿರುಗಿದ ಯಾತ್ರಾರ್ಥಿಗಳು ಶ್ರೀನಗರ ವಿಮಾನ ನಿಲ್ದಾಣದಿಂದ ಹೊರಬಂದಾಗ, ಕಾಶ್ಮೀರಿ ಪಂಡಿತ ಸಹೋದರರು ನಾತ್ ಪಠಿಸಿ, ಆರತಿ ಮಾಡುವ ಮೂಲಕ ಅವರನ್ನು ಸ್ವಾಗತಿಸಿದರು ಮತ್ತು ಅಭಿನಂದಿಸಿದರು. ಈ ಪ್ರೀತಿ ರಾಜಕೀಯ ದುಷ್ಟ ಕಣ್ಣುಗಳಿಗೆ ಬೀಳುವುದಿಲ್ಲ ಎಂದು ಭಾವಿಸುತ್ತೇವೆ" ಎಂದು ಅವರು ಹಿಂದಿಯಲ್ಲಿ ಬರೆದಿದ್ದಾರೆ.
हज करके लौटे हाजी लोग श्रीनगर एयरपोर्ट से निकले तो कश्मीरी पंडित भाईयों ने नात पढ़ते हुए आरती उतार कर उनका स्वागत किया और मुबारकबाद दी।
— Abbas Bin Mukhtar Ansari (@AbbasAnsari_) July 16, 2022
इस मुहब्बत को राजनीति की नज़र ना लगे। pic.twitter.com/Oo338QsrlV