ಎ.ಸಿ.ಬಿಯಿಂದ ಅಹವಾಲು ಸ್ವೀಕಾರ
ಉಡುಪಿ : ಉಡುಪಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಜುಲೈ ೧೯ರಂದು ಬೆಳಗ್ಗೆ ೧೧ರಿಂದ ಅಪರಾಹ್ನ ೧:೦೦ರವರೆಗೆ ಬೈಂದೂರು ಪ್ರವಾಸಿ ಮಂದಿರ ಹಾಗೂ ಅಪರಾಹ್ನ ೨:೩೦ರಿಂದ ಸಂಜೆ ೪:೩೦ರವರೆಗೆ ಕುಂದಾಪುರ ಪ್ರವಾಸಿ ಮಂದಿರದಲ್ಲಿ, ಜುಲೈ ೨೦ರಂದು ಬೆಳಗ್ಗೆ ೧೧ರಿಂದ ಅಪರಾಹ್ನ ೧:೦೦ರವರೆಗೆ ಕಾರ್ಕಳ ಪ್ರವಾಸಿ ಮಂದಿರ ಹಾಗೂ ಅಪರಾಹ್ನ ೨:೩೦ರಿಂದ ಸಂಜೆ ೪:೩೦ರವರೆಗೆ ಹೆಬ್ರಿ ಪ್ರವಾಸಿ ಮಂದಿರದಲ್ಲಿ ಮತ್ತು ಜುಲೈ ೨೧ರಂದು ಬೆಳಗ್ಗೆ ೧೧ರಿಂದ ಅಪರಾಹ್ನ ೧:೦೦ರವರೆಗೆ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡದಲ್ಲಿ ಹಾಗೂ ಅಪರಾಹ್ನ ೨:೩೦ ರಿಂದ ಸಂಜೆ ೪:೩೦ರವರೆಗೆ ಕಾಪು ಶ್ರೀವೀರಭದ್ರ ಸಭಾಂಗಣದಲ್ಲಿ ಸಾರ್ವಜನಿಕ ರಿಂದ ಅಹವಾಲು ಸ್ವೀಕರಿಸಲಿದ್ದಾರೆ.
ಸಾರ್ವಜನಿಕ ನೌಕರರು ತನ್ನ ದಿನನಿತ್ಯದ ಕರ್ತವ್ಯಗಳನ್ನು ನಿರ್ವಹಿಸಲು ಅನಗತ್ಯ ವಿಳಂಬ ಮಾಡಿದಲ್ಲಿ, ನಿರ್ಲಕ್ಷ್ಯ ತೋರಿದಲ್ಲಿ, ಲಂಚ ಕೇಳಿದಲ್ಲಿ ಹಾಗೂ ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಹೊಂದಿದ್ದಲ್ಲಿ ದೂರು ಸ್ವೀಕರಿಸಲಾ ಗುವುದು ಎಂದು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





