Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಶ್ರೀಲಂಕಾದ ರೀತಿ ಆರ್ಥಿಕ ಬಿಕ್ಕಟ್ಟಿನ...

ಶ್ರೀಲಂಕಾದ ರೀತಿ ಆರ್ಥಿಕ ಬಿಕ್ಕಟ್ಟಿನ ಅಪಾಯ ವಲಯದಲ್ಲಿ ಇನ್ನಷ್ಟು ದೇಶಗಳು

ಪಟ್ಟಿಯಲ್ಲಿ ಯಾವುದೆಲ್ಲಾ ದೇಶಗಳಿವೆ ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ16 July 2022 9:16 PM IST
share
ಶ್ರೀಲಂಕಾದ ರೀತಿ ಆರ್ಥಿಕ ಬಿಕ್ಕಟ್ಟಿನ ಅಪಾಯ ವಲಯದಲ್ಲಿ ಇನ್ನಷ್ಟು ದೇಶಗಳು

ನ್ಯೂಯಾರ್ಕ್, ಜು.16: ಶ್ರೀಲಂಕಾದ ರೀತಿಯಲ್ಲಿಯೇ ವಿಶ್ವದಲ್ಲಿ ಇನ್ನೂ ಹಲವು ದೇಶಗಳು ತೀವ್ರ ಆರ್ಥಿಕ ಬಿಕ್ಕಟ್ಟಿನ ಅಪಾಯದ ವಲಯದಲ್ಲಿವೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ. ಒಂದು ದೇಶದ ಕರೆನ್ಸಿ ತೀವ್ರಗತಿಯಲ್ಲಿ ಅಪಮೌಲ್ಯಗೊಳ್ಳುತ್ತಿರುವುದು ಸಾಂಪ್ರದಾಯಿಕ ಆರ್ಥಿಕ ಮುಗ್ಗಟ್ಟಿನ ಸಂಕೇತವಾಗಿದೆ. 

1000 ಬೇಸಿಕ್ ಪಾಯಿಂಟ್ ಬಾಂಡ್ ಸ್ಪ್ರೆಡ್ಗಳು, ವಿದೇಶಿ ವಿನಿಮಯ ಮೀಸಲು ನಿಧಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದರಿಂದ ದಾಖಲೆ ಮಟ್ಟದಲ್ಲಿ ಅಭಿವೃದ್ಧಿಶೀಲ ದೇಶಗಳು ಈಗ ಸಮಸ್ಯೆಯ ಸುಳಿಯಲ್ಲಿ ಸಿಲುಕಿವೆ. (ಒಂದು ಬಾಂಡ್ 5% ಇಳುವರಿ, ಇನ್ನೊಂದು ಬಾಂಡ್ 4% ಇಳುವರಿ ನೀಡಿದರೆ ಆಗ ಬಾಂಡ್ಸ್ಪ್ರೆಡ್ ಎಂಬುದು 1% ಆಗಿರುತ್ತದೆ). 

ಅಂತರಾಷ್ಟ್ರೀಯ ಸಾಲ ಮರುಪಾವತಿಸದ ‘ಡಿಫಾಲ್ಟ್’ ದೇಶಗಳ ಪಟ್ಟಿಯಲ್ಲಿ ಈಗಾಗಲೇ ಶ್ರೀಲಂಕಾ, ಲೆಬನಾನ್, ರಶ್ಯಾ, ಸುರಿನಾಮ್ ಮತ್ತು ಝಾಂಬಿಯಾ ಸ್ಥಾನ ಪಡೆದಿದ್ದರೆ ಕನಿಷ್ಟ 12 ದೇಶಗಳು ಅರ್ಥಿಕ ವಿಪತ್ತಿನ ಅಪಾಯಕಾರಿ ವಲಯದಲ್ಲಿವೆ. 
ಸಾಲದ ಬಡ್ಡಿದರ ಹೆಚ್ಚಳ, ಹಣದುಬ್ಬರ ಮತ್ತು ಹೆಚ್ಚುತ್ತಿರುವ ಸಾಲದ ಹೊರೆಯು ಅರ್ಥವ್ಯವಸ್ಥೆಯ ಪತನದ ಭೀತಿಯನ್ನು ಮೂಡಿಸಿದೆ. ಆದರೆ ಜಾಗತಿಕ ಮಾರುಕಟ್ಟೆ ಶಾಂತವಾಗಿದ್ದರೆ ಮತ್ತು ಐಎಂಎಫ್ನ ನೆರವು ದೊರೆತರೆ ಕೆಲವು ದೇಶಗಳು ಈಗಲೂ ಅಪಾಯದಿಂದ ಪಾರಾಗಿ ಡಿಫಾಲ್ಟ್ ಅನ್ನು ತಪ್ಪಿಸಿಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಅಧಿಕ ಅಪಾಯದಲ್ಲಿರುವ ದೇಶಗಳು ಇವು: 

ಅರ್ಜೆಂಟೀನಾ: ಸೊವರಿನ್ ಡಿಫಾಲ್ಟ್ (ಸರಕಾರಿ ಸಾಲದ ಮರುಪಾವತಿಗೆ ವಿಫಲ) ನಲ್ಲಿ ವಿಶ್ವದಾಖಲೆ ಬರೆದ ದೇಶವಿದು. ದೇಶದ ಕರೆನ್ಸಿಯಾಗಿರುವ ಪೆಸೊ ಬ್ಲ್ಯಾಕ್ಮಾರ್ಕೆಟ್ನಲ್ಲಿ 50% ರಿಯಾಯ್ತಿ ದರದಲ್ಲಿ ದೊರಕುತ್ತದೆ. ಈ ದೇಶದಲ್ಲಿ ವಿದೇಶಿ ವಿನಿಮಯ ದಾಸ್ತಾನು ಕನಿಷ್ಟ ಮಟ್ಟದಲ್ಲಿದೆ ಮತ್ತು ಬಾಂಡ್ಗಳು ಡಾಲರ್ನಲ್ಲಿ ಕೇವಲ 20 ಸೆಂಟ್ಗಳಿಗೆ ಮಾರಾಟವಾಗುತ್ತಿವೆ. ಆದರೆ 2024ರವರೆಗೆ ಸರಕಾರ ಯಾವುದೇ ಗಣನೀಯ ಸಾಲ ಮರುಪಾವತಿಸುವ ಬದ್ಧತೆ ಹೊಂದಿಲ್ಲ. ಆದರೆ ಆ ಬಳಿಕ ಸಾಲ ಮರುಪಾವತಿಯ ಹೊರೆ ಹೆಚ್ಚಲಿದೆ. 

ಉಕ್ರೇನ್: ರಶ್ಯದ ಆಕ್ರಮಣದಿಂದ ತತ್ತರಿಸಿರುವ ಉಕ್ರೇನ್ ಇದೀಗ ತನ್ನ 20 ಬಿಲಿಯನ್ ಡಾಲರ್ಗೂ ಅಧಿಕ ಮೊತ್ತದ ಸಾಲದ ಪುನರ್ರಚನೆಯ ಅನಿವಾರ್ಯತೆಯಲ್ಲಿದೆ ಎಂದು ಹೂಡಿಕೆ ಮಾರುಕಟ್ಟೆಯ ಪ್ರಮುಖ ಸಂಸ್ಥೆ ಮಾರ್ಗನ್ ಸ್ಟ್ಯಾನ್ಲಿ ಎಚ್ಚರಿಸಿದ್ದಾರೆ. ಸೆಪ್ಟಂಬರ್ನಲ್ಲಿ 1.2 ಬಿಲಿಯನ್ ಡಾಲರ್ ಮೊತ್ತದ ಸಾಲ ಮರುಪಾವತಿಗೆ ಬಾಕಿಯಾಗಿದೆ. ಹರಿದು ಬರುತ್ತಿರುವ ನೆರವು ಹಾಗೂ ಮೀಸಲು ನಿಧಿಯನ್ನು ಬಳಸಿ ಉಕ್ರೇನ್ ಅಂತರಾಷ್ಟ್ರೀಯ ಸಾಲದ ಬಾಧ್ಯತೆಯನ್ನು ತೀರಿಸಬಹುದು. ಆದರೆ 2 ವರ್ಷ ಸಾಲ ಸ್ಥಂಬನಕ್ಕೆ ಸರಕಾರ ಬೇಡಿಕೆ ಇರಿಸಿರುವುದರಿಂದ ಹೂಡಿಕೆದಾರರು ಸರಕಾರದ ವಿರುದ್ಧ ದಾವೆ ಹೂಡುವ ಸಾಧ್ಯತೆಯಿದೆ. 

ಟ್ಯುನೀಷಿಯಾ: ಆಫ್ರಿಕಾದ ಹಲವು ದೇಶಗಳು ಆರ್ಥಿಕ ವಿಪತ್ತಿನ ಅಂಚಿನಲ್ಲಿದ್ದರೂ ಇದರಲ್ಲಿ ಟ್ಯುನೀಷಿಯಾದ ಸ್ಥಿತಿ ಗಂಭೀರವಾಗಿದೆ. ಸುಮಾರು 10% ಕೊರತೆ ಬಜೆಟ್, ವಿಶ್ವದಲ್ಲಿ ಅತ್ಯಧಿಕ ಸಾರ್ವಜನಿಕ ವಲಯದ ವೇತನ ಪಾವತಿಸುವ ದೇಶವಾಗಿರುವ ಟ್ಯುನೀಷಿಯಾದ ಅಧ್ಯಕ್ಷ ಕಯಿಸ್ ಸಯೀದ್ ಆಡಳಿತವನ್ನು ಕಪಿಮುಷ್ಟಿಯಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ಐಎಂಎಫ್ನ ಸಾಲ ದೊರೆಯುವುದು ಅನುಮಾನವಾಗಿದೆ. ಈ ದೇಶದ ಬಾಂಡ್ ಸ್ಪ್ರೆಡ್ 2,800 ಅಂಕಗಳನ್ನೂ ಮೀರಿದ್ದು, ಎಲ್ಸಲ್ವದೋರ್, ಉಕ್ರೇನ್ನೊಂದಿಗೆ ಸಂಭಾವ್ಯ ಡಿಫಾಲ್ಟರ್ಗಳ ಪಟ್ಟಿಯಲ್ಲಿ ಅಗ್ರ 3 ಸ್ಥಾನ ಪಡೆಯವ ಸಾಧ್ಯತೆಯಿದೆ. ಐಎಂಎಫ್ ಜತೆ ಒಪ್ಪಂದ ಏರ್ಪಡುವುದು ಅತ್ಯಗತ್ಯವಾಗಿದೆ ಎಂದು ಟ್ಯುನೀಷಿಯಾದ ಸೆಂಟ್ರಲ್ ಬ್ಯಾಂಕ್ ಅಧ್ಯಕ್ಷ ಮರೋವನ್ ಅಬ್ಬಾಸಿ ಹೇಳಿದ್ದಾರೆ. 

ಘಾನಾ: ವಿಪರೀತ ಸಾಲ ಪಡೆದಿರುವುದರಿಂದ ಘಾನಾದ ಸಾಲ ಮತ್ತು ಜಿಡಿಪಿಯ ಅನುಪಾತ 85%ಕ್ಕೆ ತಲುಪಿದೆ. ದೇಶದ ಕರೆನ್ಸಿ ಸೆಡಿ ಈ ವರ್ಷ ತನ್ನ ಮುಖಬೆಲೆಯ 25%ವನ್ನು ಕಳೆದುಕೊಂಡಿದೆ. ಹಣದುಬ್ಬರವೂ ಸುಮಾರು 30%ಕ್ಕೆ ತಲುಪಿದ್ದು ತೆರಿಗೆ ಆದಾಯವನ್ನು ಬಳಸಿ ಸಾಲದ ಬಡ್ಡಿ ಪಾವತಿ ಮಾಡುತ್ತಿದೆ. 

ಈಜಿಪ್ಟ್: ಈಜಿಪ್ಟ್ನ ಸಾಲ ಮತ್ತು ಜಿಡಿಪಿಯ ಅನುಪಾತ ಸುಮಾರು 95% ಆಗಿದ್ದು ಈ ವರ್ಷ ಸುಮಾರು 11 ಬಿಲಿಯನ್ ಡಾಲರ್ ಅಂತರಾಷ್ಟ್ರೀಯ ಸಾಲ ಮರುಪಾವತಿಯ ಒತ್ತಡದಲ್ಲಿದೆ. ಮುಂದಿನ 5 ವರ್ಷದಲ್ಲಿ 100 ಬಿಲಿಯನ್ ಡಾಲರ್ ಸಾಲ ಮರುಪಾವತಿಸಬೇಕಿದ್ದು ಇದರಲ್ಲಿ 3.3 ಬಿಲಿಯನ್ ಡಾಲರ್ನಷ್ಟು ಬಾಂಡ್ ಮೊತ್ತವನ್ನು 2024ರಲ್ಲಿ ಪಾವತಿಸಬೇಕಿದೆ. ದೇಶದ ಕರೆನಿಯಾಗಿರುವ ಪೌಂಡ್ ಅನ್ನು ಮಾರ್ಚ್ನಲ್ಲಿ 15% ಅಪಮೌಲ್ಯಗೊಳಿಸಿ ಐಎಂಎಫ್ನ ಸಾಲಕ್ಕೆ ಮನವಿ ಮಾಡಿದೆ. ಆದರೆ ಬಾಂಡ್ ಸ್ಪ್ರೆಡ್ 1200 ಅಂಕವನ್ನು ಮೀರಿರುವುದರಿಂದ ಸಾಲ ದೊರೆಯುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗಿದೆ. 

ಕೆನ್ಯಾದ ಆದಾಯದಲ್ಲಿ ಸುಮಾರು 30% ಸಾಲದ ಬಡ್ಡಿ ಪಾವತಿಗೇ ಖರ್ಚಾಗುತ್ತದೆ. ದೇಶದ ಬಾಂಡ್ಗಳ ಮೌಲ್ಯ ಸುಮಾರು 50% ಕಡಿಮೆಯಾಗಿದ್ದು, 2024ರಲ್ಲಿ 2 ಬಿಲಿಯನ್ ಡಾಲರ್ ಸಾಲ ಮರುಪಾವತಿಸಬೇಕಿದೆ. 

ಇಥಿಯೋಪಿಯಾ: ದೇಶದಲ್ಲಿ ಮುಂದುವರಿದಿರುವ ಅಂತರ್ಯುದ್ಧದಿಂದಾಗಿ ಆರ್ಥಿಕತೆ ಕುಸಿತದ ಹಾದಿಯಲ್ಲಿದ್ದು ಜಿ20 ಸಾಮಾನ್ಯ ಚೌಕಟ್ಟಿನ ಕಾರ್ಯಕ್ರಮದಡಿ ಸಾಲ ಮನ್ನಾ ಮಾಡಿಕೊಳ್ಳಲು ಸರಕಾರ ಯೋಜಿಸಿದೆ. 

ಪಾಕಿಸ್ತಾನ: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನದ ವಿದೇಶಿ ಕರೆನ್ಸಿಯ ದಾಸ್ತಾನು 9.8 ಬಿಲಿಯನ್ ಡಾಲರ್ ಮಟ್ಟಕ್ಕೆ ಇಳಿದಿದ್ದು ಇದು 5 ವಾರ ಅಗತ್ಯ ವಸ್ತುಗಳ ಆಮದಿಗೆ ಸಾಕಾಗಲಿದೆ. ದೇಶದ ಕರೆನ್ಸಿಯಾದ ರೂಪಾಯಿಯ ಮೌಲ್ಯ ದಾಖಲೆ ಮಟ್ಟಕ್ಕೆ ಇಳಿದಿದೆ. ದೇಶದ ಆದಾಯದ 40%ದಷ್ಡು ಸಾಲದ ಬಡ್ಡಿ ಪಾವತಿಗೇ ವೆಚ್ಚವಾಗುತ್ತಿದೆ. ಈ ವಾರ ನಿರ್ಣಾಯಕ ಐಎಂಎಫ್ ಸಾಲಕ್ಕೆ ಸಹಿ ಬಿದ್ದಿರುವುದು ದೇಶಕ್ಕೆ ತುಸು ನಿರಾಳತೆ ಒದಗಿಸಿದೆ. ಆದರೆ ಇಂಧನ ಆಮದಿಗೆ ಹೆಚ್ಚಿನ ಮೊತ್ತ ಖರ್ಚಾಗುವುದು ಸಮಸ್ಯೆಯನ್ನು ಹೆಚ್ಚಿಸಿದೆ. ಎಲ್ಸಲ್ವದೋರ್, ಇಕ್ವೆಡಾರ್, ನೈಜೀರಿಯಾ, ಬೆಲಾರಸ್ ದೇಶಗಳ ಅಂತರಾಷ್ಟ್ರೀಯ ಸಾಲದ ಬಾಧ್ಯತೆ ಹೆಚ್ಚಿದ್ದು ಡಿಫಾಲ್ಟರ್ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X