ಮಳೆ ಹಾನಿಗೀಡಾದ ಕಣ್ಣೂರು, ಸುಂಕದಕಟ್ಟೆಗೆ ಐವನ್ ಡಿಸೋಜ ಭೇಟಿ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ೫೨ನೇ ಕಣ್ಣೂರು ವಾರ್ಡಿನ ಬಳ್ಳೂರು ಗುಡ್ಡೆ ಕುಸಿತ ಪ್ರದೇಶಕ್ಕೆ ಮತ್ತು ಮನೆ ಕುಸಿತಗೊಂಡ ಉರ್ವ ಸಮೀಪದ ಸುಂಕದಕಟ್ಟೆಗೆ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಭೇಟಿ ನೀಡಿದರು.
ಕಣ್ಣೂರು ಬಳ್ಳೂರು ಗುಡ್ಡೆಯಲ್ಲಿ ಸುಮಾರು ೧೫ ಮನೆಗಳು ಅಪಾಯದ ಅಂಚಿನಲ್ಲಿದೆ. ಸತತ ಸುರಿಯುವ ಮಳೆಯಿಂದ ಮತ್ತಷ್ಟು ಮಣ್ಣು ಕುಸಿತಗೊಳ್ಳುವ ಭೀತಿ ಇದೆ. ಇಲ್ಲಿನ ಜನರು ನೀರು, ವಿದ್ಯುತ್ ಮತ್ತಿತರ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ನಗರಪಾಲಿಕೆಯಿಂದ ರಚನೆಗೊಂಡ ಗೋಡೆಯೂ ಕುಸಿತಗೊಂಡಿದೆ. ಹಾಗಾಗಿ ಸುರಕ್ಷತೆಯ ದೃಷ್ಟಿಯಿಂದ ಮನೆಯವರನ್ನು ಸ್ಥಳಾಂತರಿಸಬೇಕು ಎಂದು ಐವನ್ ಡಿಸೋಜ ಒತ್ತಾಯಿಸಿದರು.
ಉರ್ವ ಸುಂಕದಕಟ್ಟೆಯಲ್ಲಿ ಕುಸಿತಗೊಂಡ ಮನೆಯವರಿಗೆ ೫ ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಮನೆಯನ್ನು ಪುನಃ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಕಣ್ಣೂರು ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಇ.ಕೆ., ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಖಾದರ್, ಹಬಿಬುಲ್ಲಾ ಕಣ್ಣೂರು, ಮುಹಮ್ಮದ್ ಶರೀಫ್ ಬಳ್ಳೂರು ಗುಡ್ಡೆ, ಇಂತಿಕಾಬ್ ಬೀಡು, ಸಲೀಂ ಮುಕ್ಕ, ಹಸನ್ ಪಳ್ನೀರ್, ಇಮ್ತಿ ಬಳ್ಳೂರು ಗುಡ್ಡೆ, ನೌಶಾದ್ ಬಳ್ಳೂರು ಗುಡ್ಡೆ, ದಾವುದ್, ರಿಯಾಝ್ ಕಣ್ಣೂರು, ಸುಂಕದಕಟ್ಟೆ ಬೂತ್‌ನ ಕಾಂಗ್ರೆಸ್ ಅಧ್ಯಕ್ಷ ತಮ್ಮಣ್ಣ, ಚೇತನ್ ಕುಮಾರ್ ಉರ್ವ, ರೂಪಾಚೇತನ್, ಸಂತೋಷ್, ರವಿಕುಮಾರ್, ಪದ್ಮಾ ಸುಂಕದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.







