ವಿಕಲಚೇತನರಿಗೆ ಯುಡಿಐಡಿ ಕಾರ್ಡ್ ಕಡ್ಡಾಯ
ಮಂಗಳೂರು : ದ.ಕ.ಜಿಲ್ಲಾ ವ್ಯಾಪ್ತಿಯ ವಿಕಲಚೇತನರು ಸರಕಾರದ ಸೌಲಭ್ಯ ಪಡೆಯಲು ಯುಡಿಐಡಿ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ. ಈ ಕಾರ್ಡ್ ಇಲ್ಲದಿದ್ದಲ್ಲಿ ಸರಕಾರದಿಂದ ಮಾಸಾಶನ, ಸಾಧನ ಸಲಕರಣೆಗಳು, ಬಸ್‌ಪಾಸ್ ಇತ್ಯಾದಿಗಳು ರದ್ದಾಗುವ ಸಾಧ್ಯತೆಯಿದೆ. ಹಾಗಾಗಿ ಹೆಸರು ನೋಂದಣಿಗೆ ಬಾಕಿಯಿರುವ ವಿಕಲಚೇತನರು ಜು.೩೧ರೊಳಗೆ ಸ್ಥಳೀಯಾಡಳಿತ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





