ಜು.18-19: ವಿವಿಧೆಡೆ ವಿದ್ಯುತ್ ವ್ಯತ್ಯಯ
ಮಂಗಳೂರು : ನಗರದ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ ಫೀಡರ್‌ಗಳಲ್ಲಿ ಜಂಪರ್ ಬದಲಾವಣೆ ಹಾಗೂ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಜು.೧೮ರಂದು ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ಬಂದರ್, ಅಜೀಜುದ್ದೀನ್ ರಸ್ತೆ, ಜೆ.ಎಂ. ರಸ್ತೆ, ಕೆಸಿಸಿಐ ರಸ್ತೆ, ಭಟ್ಕಳ್ ಬಜಾರ್, ಅನ್ಸಾರಿ ರಸ್ತೆ, ಕಂಡತ್ ಪಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
*ಜು.೧೯ರಂದು ಬೆಳಗ್ಗೆ ೧೦ರಿಂದ ಸಂಜೆ ೪ರವರೆಗೆ ಕೊಡಿಕಲ್ ೪ನೇ ಮೈಲ್, ಕೊಟ್ಟಾರ ಚೌಕಿ, ವಿವೇಕಾನಂದ ನಗರ, ಆಲಗುಡ್ಡೆ, ಜೆ.ಬಿ. ಲೋಬೊ ರೋಡ್, ಎಸ್‌ಎನ್‌ಡಿಪಿ, ಕಂಚಿಕಾರಗುತ್ತು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
Next Story