ಯುವ ಕಾಂಗ್ರೆಸ್‌ನಿಂದ ವಕ್ತಾರರ ಆಯ್ಕೆಗಾಗಿ ‘ಯಂಗ್ ಇಂಡಿಯಾ ಕೆ ಬೋಲ್’ ಭಾಷಣ ಸ್ಫರ್ಧೆ
ಮಂಗಳೂರು, ಜು.೧೬: ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿಕೊಳ್ಳುವ ಯುವ ಜನರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರರ ಆಯ್ಕೆಯಾಗಿ ‘ಯಂಗ್ ಇಂಡಿಯಾ ಕೆ ಬೋಲ್’ ಭಾಷಣ ಸ್ಫರ್ಧೆಯನ್ನು ಆಯೋಜಿಸಿದೆ.
ನಿರುದ್ಯೋಗ, ಬೆಲೆ ಏರಿಕೆ, ಅರಾಜಕತೆ ಹಾಗೂ ಇನ್ನಿತರ ಜ್ವಲಂತ ಸಮಸ್ಯೆಗಳ ಬಗ್ಗೆ ‘ಯಂಗ್ ಇಂಡಿಯಾ ಕೇ ಬೋಲ್’ನಲ್ಲಿ ಯುವ ಧ್ವನಿ ಮೊಳಗಲಿದೆ. ಆ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಗೊಂಡವರನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು ಹಾಗೂ ಆಯ್ದವರನ್ನು ಜಿಲ್ಲಾ ವಕ್ತಾರರಾಗಿ ಆಯ್ಕೆ ಮಾಡಲಾಗುವುದು. ರಾಷ್ಟ್ರೀಯ ಮಟ್ಟದ ಸ್ಪರ್ಧೆಯೂ ನಡೆಯಲಿದೆ. ಆಸಕ್ತರು
Next Story





