ಮಣಿಪುರದಲ್ಲಿ 4.8 ತೀವ್ರತೆಯ ಭೂಕಂಪ

ಮೊಯಿರಂಗ್ (ಮಣಿಪುರ): ರಿಕ್ಟರ್ ಮಾಪಕದಲ್ಲಿ 4.8 ರಷ್ಟು ತೀವ್ರತೆ ಹೊಂದಿದ್ದ ಭೂಕಂಪ ಮಣಿಪುರದಲ್ಲಿ ಶನಿವಾರ ಮಧ್ಯರಾತ್ರಿಯ ವೇಳೆಗೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ.
ಶನಿವಾರ ರಾತ್ರಿ 11.42ಕ್ಕೆ ಸುಮಾರು 94 ಕಿಲೋಮೀಟರ್ ಆಳದಲ್ಲಿ ಈ ಕಂಪನ ಸಂಭವಿಸಿದೆ ಎಂದು ಎನ್‍ಸಿಎಸ್ ಸ್ಪಷ್ಟಪಡಿಸಿದೆ.
"4.8 ತೀವ್ರತೆಯ ಭೂಕಂಪ 16-07-2022ರಂದು ರಾತ್ರಿ 23:42:18 ಸಮಯದಲ್ಲಿ ಮಣಿಪುರದ ಮೊಯಿರಂಗ್‍ನಿಂದ 66 ಕಿಲೋಮೀಟರ್ ದೂರದಲ್ಲಿ 94 ಅಡಿ ಆಳದಲ್ಲಿ ಸಂಭವಿಸಿದೆ" ಎಂದು ಎನ್‍ಸಿಎಸ್ ಟ್ವೀಟ್ ಮಾಡಿದೆ.
ಜುಲೈ 5ರಂದು ಅಸ್ಸಾಂನಲ್ಲಿ 3.7 ತೀವ್ರತೆಯ ಭೂಕಂಪ ಸಂಭವಿಸಿತ್ತು. 35 ಕಿಲೋಮೀಟರ್ ಆಳದಲ್ಲಿ ಬೆಳಗ್ಗೆ 11.03ರ ಸುಮಾರಿಗೆ ಭೂಕಂಪ ಸಂಭವಿಸಿತ್ತು ಎಂದು ndtv.com ವರದಿ ಮಾಡಿದೆ.
Next Story





