ಉಳ್ಳಾಲ : ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್

ಮಂಗಳೂರು, ಜು.17: ಪ್ರಕರಣವೊಂದರ ಆರೋಪಿ ಮುಕ್ತಾರ್ ಎಂಬಾತನ ಮೇಲೆ ಉಳ್ಳಾಲ ಪೊಲೀಸ್ ಇನ್‌ಸ್ಪೆಕ್ಟರ್ ನೇತೃತ್ವದ ತಂಡ ಇಂದು ಮುಂಜಾನೆ ಕೊಣಾಜೆಯ ಸಮೀಪ ಫೈರಿಂಗ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರ ಫೈರಿಂಗ್‌ನಿಂದ ಆರೋಪಿ ಮುಕ್ತಾರ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಮುಕ್ತಾರ್ ಪೊಲೀಸ್ ಸಿಬ್ಬಂದಿಗೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ವೇಳೆ ಫೈರಿಂಗ್ ಮಾಡಲಾಗಿದೆ. ಪ್ರಕರಣವೊಂದರ ತನಿಖೆಗಾಗಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಆರೋಪಿ ಪೊಲೀಸ್ ಸಿಬ್ಬಂದಿಗೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದು, ಈ ಸಂದರ್ಭ ಫೈರಿಂಗ್ ಮಾಡಲಾಗಿದೆ. ಆತನ ವಿರುದ್ಧ 15 ಪ್ರಕರಣಗಳಿದ್ದು, 6 ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ 5 ವರ್ಷಗಳಿಂದ ಆತನನ್ನು ಬಂಧಿಸಲಾಗಿರಲಿಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ತಿಳಿಸಿದ್ದಾರೆ.







.jpeg)

.jpeg)

.jpeg)
.jpeg)
.jpeg)

