ಮೂರನೇ ಏಕದಿನ: ಭಾರತ ವಿರುದ್ಧ ಇಂಗ್ಲೆಂಡ್ 259 ರನ್ಗೆ ಆಲೌಟ್
ಹಾರ್ದಿಕ್ ಪಾಂಡ್ಯಗೆ 4 ವಿಕೆಟ್, ಬಟ್ಲರ್ ಅರ್ಧಶತಕ

Photo:AP
ಮ್ಯಾಂಚೆಸ್ಟರ್, ಜು.17: ಆಲ್ರೌಂಡರ್ ಹಾರ್ದಿಕ್ ಪಾಂಡ್ಯ(4-24), ಸ್ಪಿನ್ನರ್ ಯಜುವೇಂದ್ರ ಚಹಾಲ್(3-60) ಹಾಗೂ ಮುಹಮ್ಮದ್ ಸಿರಾಜ್(2-66)ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಸರಣಿ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು 259 ರನ್ಗೆ ಕಟ್ಟಿಹಾಕಿದೆ.
ಟಾಸ್ ಜಯಿಸಿದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.
ಇಂಗ್ಲೆಂಡ್ ತಂಡ ಜಾನಿ ಬೈರ್ಸ್ಟೋವ್(0)ಹಾಗೂ ಜೋ ರೂಟ್(0) ಅವರನ್ನು ಶೂನ್ಯಕ್ಕೆ ಕಳೆದುಕೊಂಡಿದ್ದರೂ ನಾಯಕ ಜೋಸ್ ಬಟ್ಲರ್(60 ರನ್, 80 ಎಸೆತ,3 ಬೌಂಡರಿ, 2 ಸಿಕ್ಸರ್), ಆರಂಭಿಕ ಬ್ಯಾಟರ್ ಜೇಸನ್ ರಾಯ್(41 ರನ್, 31 ಎಸೆತ, 7 ಬೌಂಡರಿ), ಮೊಯಿನ್ ಅಲಿ(34 ರನ್, 44 ಎಸೆತ, 2 ಬೌಂ., 2 ಸಿ.) ಹಾಗೂ ಕ್ರೆಗ್ ಎವರ್ಟನ್(32ರನ್, 33 ಎಸೆತ, 1 ಬೌಂ., 1 ಸಿ.)ಪ್ರಯತ್ನದ ಫಲವಾಗಿ 45.5 ಓವರ್ಗಳಲ್ಲಿ 259 ರನ್ ಗಳಿಸಿ ಆಲೌಟಾಯಿತು.
Next Story





