ಭಾರೀ ಮಳೆ: ಬೈಂದೂರಿನ ಹಲವು ಪ್ರದೇಶ ಜಲಾವೃತ

ಬೈಂದೂರು : ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೈಂದೂರು ತಾಲೂಕಿನ ಹಲವು ಪ್ರದೇಶಗಳು ಮತ್ತೆ ಜಲಾವೃತಗೊಂಡಿದ್ದು, ಅಪಾರ ಹಾನಿ ಸಂಭವಿಸಿದೆ.
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಯುವ ಉದ್ಯಮಿ ನಿತಿನ್ ನಾರಾಯಣ ಭೇಟಿ ನೀಡಿ, ನೆರೆಪೀಡಿತ ಪ್ರದೇಶಗಳಾದ ನಾವುಂದ, ಬಡಾಕೆರೆ, ಸಾಲ್ಬುಡ, ಹಳಗೇರಿ ಹಾಗೂ ನೇರಳಕಟ್ಟೆ ಗ್ರಾಮಗಳ ೧೫೦ಕ್ಕೂ ಅಧಿಕ ಕುಟುಂಬ ಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸಿದರು. ನೆರೆಯ ಸಂದರ್ಭ ದೋಣಿಗಳಲ್ಲಿ ಜನ ಹಾಗೂ ಜಾನುವಾರು ರಕ್ಷಣೆಯಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಸ್ವಯಂಸೇವಕರಿಗೆ ಉತ್ತಮ ಗುಣಮಟ್ಟದ ಲೈಫ್ ಜಾಕೆಟ್ ಗಳನ್ನು ನೀಡಿದರು.
Next Story