ಜು.18ರಂದು ದ.ಕ.ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ
ಮಂಗಳೂರು : ಭಾರತೀಯ ಹವಾಮಾನ ಇಲಾಖೆಯು ಜು.೧೮ರಂದು ದ.ಕ.ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಅದರಂತೆ ಸೋಮವಾರ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ.
ರವಿವಾರ ಯೆಲ್ಲೋ ಅಲರ್ಟ್ ಘೊಷಿಸಿದಂತೆ ಸಾಧಾರಣ ಮಳೆಯಾಗಿತ್ತು. ಬಹುತೇಕ ಹಗಲು ಹೊತ್ತು ಮೋಡ ಕವಿದ ಮತ್ತು ಬಿಸಿಲಿನ ವಾತಾವರಣದ ಮಧ್ಯೆ ಅಲ್ಲಲ್ಲಿ ತುಂತುರು ಮತ್ತು ಸಾಧಾರಣ ಮಳೆಯಾಗಿದೆ.
*ದ.ಕ.ಜಿಲ್ಲೆಯಲ್ಲಿ ಶನಿವಾರ ಬೆಳಗ್ಗಿನಿಂದ ರವಿವಾರ ಬೆಳಗ್ಗಿನವರೆಗೆ ಮೂಡುಬಿದಿರೆಯಲ್ಲಿ ಗರಿಷ್ಠ ೯೯.೨ ಮಿ.ಮೀ.ಮಳೆ ದಾಖಲಾಗಿದೆ. ಬೆಳ್ತಂಗಡಿ ೮೪.೫ ಮಿ.ಮೀ, ಬಂಟ್ವಾಳ ೫೨.೭ ಮಿ.ಮೀ, ಮಂಗಳೂರು ೪೦.೪ ಮಿ.ಮೀ, ಪುತ್ತೂರು ೬೫.೩ ಮಿ.ಮೀ, ಸುಳ್ಯ ೭೮.೯ ಮಿ.ಮೀ, ಕಡಬ ೬೮.೪ ಮಿ.ಮೀ. ಮಳೆಯಾಗಿದೆ. ದಿನದ ಸರಾಸರಿ ಮಳೆ ೭೧ ಮಿ.ಮೀ. ದಾಖಲಾಗಿದೆ.
ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ ೨೭.೮ ಮೀ., ಬಂಟ್ವಾಳದಲ್ಲಿ ನೇತ್ರಾವತಿ ನದಿ ೬.೨ ಮೀ., ಗುಂಡ್ಯ ಹೊಳೆ ೪.೨ ಮೀ.ನಲ್ಲಿ ನೀರು ಹರಿಯುತ್ತಿದೆ.
ದ.ಕ. ಜಿಲ್ಲೆಯಲ್ಲಿ ರವಿವಾರ ಕಡಬ ತಾಲೂಕಿನಲ್ಲಿ ೧ ಮನೆ ಸಂಪೂರ್ಣ ಮತ್ತು ಸುಳ್ಯ ತಾಲೂಕಿನಲ್ಲಿ ೫, ಕಡಬ, ಮುಲ್ಕಿ ತಾಲೂಕಿನ ತಲಾ ಒಂದೊಂದು ಸಹಿತ ೭ ಮನೆಗಳು ಭಾಗಶಃ ಹಾನಿಗೀಡಾಗಿವೆ. ಒಟ್ಟಾರೆ ಈವರೆಗೆ ೯೦ ಮನೆಗಳು ಸಂಪೂರ್ಣ ಮತ್ತು ೫೩೨ ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಮೆಸ್ಕಾಂಗೆ ಸಂಬಂಧಿಸಿದಂತೆ ೧೧೩ ವಿದ್ಯುತ್ ಕಂಬಗಳು, ೨ ಟ್ರಾನ್ಸ್ ಫಾರ್ಮರ್‌ಗಳಿಗೆ ಹಾನಿಗೀಡಾಗಿವೆ. ಒಟ್ಟಿನಲ್ಲಿ ಈವರೆಗೆ ೩,೬೨೯ ವಿದ್ಯುತ್ ಕಂಬಗಳು ಮತ್ತು ೨೩೬ ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
ದ.ಕ.ಜಿಲ್ಲೆಯ ಮಳೆ ವಿವರ
*ಮಂಗಳೂರು: ೪೦.೪ ಮಿ.ಮೀ.
*ಬಂಟ್ವಾಳ: ೫೨.೭ ಮಿ.ಮೀ.
*ಪುತ್ತೂರು: ೬೫.೩ ಮಿ.ಮೀ.
*ಬೆಳ್ತಂಗಡಿ: ೮೪.೫ ಮಿ.ಮೀ
*ಸುಳ್ಯ: ೭೮.೩ ಮಿ.ಮೀ.
*ಮೂಡುಬಿದಿರೆ: ೯೯.೨ ಮಿ.ಮೀ
*ಕಡಬ: ೬೮.೪ ಮಿ.ಮೀ
(ಸರಾಸರಿ-೭೧.೦ ಮಿ.ಮೀ.)







