ಭತ್ತ ನಾಟಿ ಯಂತ್ರಗಳು ವಾಪಾಸ್ಸು ನೀಡದೆ ವಂಚನೆ ಆರೋಪ; ದೂರು
ಬ್ರಹ್ಮಾವರ : ರಿಪೇರಿ ಮಾಡುವ ನೆಪದಲ್ಲಿ ತೆಗೆದುಕೊಂಡ 12 ಲಕ್ಷ ರೂ. ಮೌಲ್ಯದ ೪ ಭತ್ತ ನಾಟಿ ಯಂತ್ರಗಳನ್ನು ವಾಪಾಸ್ಸು ನೀಡದೆ ಮೋಸ ಮಾಡಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಕೇದೋರೊತ್ಥಾನ ಟ್ರಸ್ಟ್ ಸದಸ್ಯರಾಗಿರುವ ಮಹೇಂದ್ರ ಕುಮಾರ್ ೨೦೨೧-೨೨ನೇ ಸಾಲಿನಲ್ಲಿ ಹಡಿಲು ಭೂಮಿ ಕೃಷಿ ಯೋಜನೆಯಡಿ ೪ ಭತ್ತ ನಾಟಿ ಯಂತ್ರಗಳನ್ನು ಖರೀದಿಸಿ, ಈ ವರ್ಷದ ನಾಟಿ ಪ್ರಾರಂಭವಾಗುವ ಮೊದಲೇ ಯಂತ್ರಗಳನ್ನು ದುರಸ್ಥಿ ಮಾಡುವುದಕ್ಕಾಗಿ ಬ್ರಹ್ಮಾವರ ಕೃಷಿ ಕೇಂದ್ರದ ವಠಾದಲ್ಲಿ ಇಟ್ಟಿದ್ದರು. ಎಪ್ರಿಲ್ ತಿಂಗಳಲ್ಲಿ ಈ ಯಂತ್ರಗಳನ್ನು ರಿಪೇರಿ ಮಾಡುವ ನೆಪದಲ್ಲಿ ಶ್ರೀಕಾಂತ್ ಭಟ್ ತೆಗೆದುಕೊಂಡು ಹೋಗಿದ್ದು, ಇದುವರೆಗೂ ಯಂತ್ರ ಗಳನ್ನು ವಾಪಾಸ್ಸು ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.
Next Story