ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಅಭಿನಂದನಾ ಕಾರ್ಯಕ್ರಮ

ಮಂಗಳೂರು: ಕೇಂದ್ರ ಸರಕಾರದಿಂದ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಇನೋಳಿ ದೇವಂದಬೆಟ್ಟ ಶ್ರೀ ಸೋಮನಾಥೇಶ್ವರ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ವತಿಯಿಂದ ಧರ್ಮಸ್ಥಳ ಕ್ಷೇತ್ರದಲ್ಲಿ ಅಭಿನಂದಿಸಲಾಯಿತು.
ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಕಿಲ್ಲೂರು ಗುತ್ತು, ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ಶ್ರೀನಿವಾಸ ಇನೋಳಿ, ಟ್ರಸ್ಟಿಗಳಾದ ಗೋಪಾಲ ಶೆಟ್ಟಿ ಬಾರ್ಲ, ಪ್ರಭಾಕರ ನಾಯಕ್ ಕೊಪ್ಪಲ, ಸತೀಶ್ ಶೆಟ್ಟಿ ಇನೋಳಿ ಬೀಡು, ಶಿವಪ್ಪಪಜಿಲ, ಲೀಲಾವತಿ ನಾಟ್ರಕೋಡಿ, ಪಜೀರ್ ಅರಸು ಮುಂಡಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ರಾಜೇಶ್ ಶೆಟ್ಟಿ ಪಜೀರುಗುತ್ತು, ಸೋಮನಾಥ ದೇವಸ್ಥಾನ ಸೇವಾ ಸಮಿತಿಯ ಸದಸ್ಯರಾದ ಕಿರಣ್ ಶೆಟ್ಟಿ ಕಿಲ್ಲೂರು ಲಕ್ಕೆ, ಗೋಪಾಲ ಕೋರ್ಯ, ಪ್ರಶಾಂತ್ ಆಳ್ವ, ಕೇಶವ ಪೂಜಾರಿ ಕಿಲ್ಲೂರು, ರವಿ ರೈ ಸುಣ್ಣಕಲ್ಲು, ರಘುನಾಥ್ ರೈ ಕೊಂತಪದವು, ಪ್ರವೀಣ್ ಕುಮಾರ್ ಎ ಸೈಟ್, ವಿಠಲ ಪೂಂಜಾ ಕಿಲ್ಲೂರುಗುತ್ತು, ಭಜನಾ ಮಂಡಳಿಯ ಅಧ್ಯಕ್ಷ ವಾಸುದೇವ ನಾಯಕ್, ಮಾತೃಮಂಡಳಿ ಅಧ್ಯಕ್ಷೆ ಜಯಂತಿ ಲೀಲಾಧರ ಪೂಜಾರಿ, ಸದಸ್ಯೆ ಮಮತಾ ಪೂಂಜಾ ಕಿಲ್ಲೂರುಗುತ್ತು, ಹನುಮಂತಯ್ಯ, ಉಮೇಶ್ ಉಪಸ್ಥಿತರಿದ್ದರು.